September 10, 2025
sathvikanudi - ch tech giant

ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕ ಹಾಗೂ ವರದಿಗಾರ ಸಂಘಟನೆಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆರತಿ ಗಿಳಿಯಾರ್ ಆಯ್ಕೆ..!?

Spread the love



ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ, ಸಂಪಾದಕ ಹಾಗೂ ವರದಿಗಾರ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಆರತಿ ಗಿಳಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಭಿಲಾಶ್ ಅವರನ್ನು ನೇಮಕ ಮಾಡಲಾಗಿದೆ.



ಈ ಆಯ್ಕೆ ಸಮಾರಂಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಶಶಿಕಾಂತ್, ರಾಜ್ಯ ಸಂಚಾಲಕಿ ಶ್ರೀಮತಿ ಬಿ. ಯಶಸ್ವಿನಿ, ಎಸ್.ಎಸ್. ಅಧ್ಯಕ್ಷ ಸಂಜಯ್, ಬೆಂಗಳೂರು ವಿಭಾಗೀಯ ಅಧ್ಯಕ್ಷ ವಿಜಯ್ ಎಂ ಹಾಗೂ ಹಲವರು ಭಾಗವಹಿಸಿದ್ದರು. ಸಂಘಟನೆಯ ಪ್ರಗತಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ ನಡೆಸಿ, ಹೊಸತಾಗಿ ಆಯ್ಕೆಗೊಂಡ ನಾಯಕರಿಗೆ ಶುಭಾಶಯ ಕೋರಲಾಯಿತು.



ಪ್ರಚಾರ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಆರತಿ ಗಿಳಿಯಾರ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಸಂಘಟನೆಯ ಉದ್ದೇಶಗಳನ್ನು ಸಫಲವಾಗಿ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದರು.ರಾಮನಗರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಶ್, ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ಪತ್ರಕರ್ತರ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಗಳನ್ನು ಪ್ರಾರಂಭಿಸುವ ಭರವಸೆ ನೀಡಿದರು.

ಸಂಘಟನೆಯ ಈ ಮಹತ್ವದ ಸಭೆಯಲ್ಲಿ ಹಲವಾರು ಪ್ರಮುಖ ಪತ್ರಕರ್ತರು, ಸಂಪಾದಕರು ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿ, ಹೊಸ ನೇಮಕಾತಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.

WhatsApp Image 2025-06-21 at 19.57.59
Trending Now