September 10, 2025
sathvikanudi - ch tech giant

ಗುಬ್ಬಿ: ದೇವರ ಮೇಲಿನ ಭಕ್ತಿಯ ಜೊತೆಗೆ ಪೋಷಕರ ಗೌರವವೂ ಮುಖ್ಯ – ಶಾಸಕ ಎಸ್.ಆರ್. ಶ್ರೀನಿವಾಸ್.!?

Spread the love

ತುಮಕೂರು :

ಗುಬ್ಬಿ: ತಾಲೂಕಿನ ಚೇಳೂರಿನಲ್ಲಿ ಈರಮಾಸ್ತಮ್ಮ ದೇವಿ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಎಸ್‌ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, “ಹಿರಿಯರನ್ನು ಗೌರವಿಸಿ, ತಂದೆ-ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಮಾಜಕ್ಕೆ ಮಾದರಿಯಾಗುತ್ತಾರೆ. ಪ್ರತಿಯೊಬ್ಬರೂ ವಿದ್ಯಾವಂತರಾಗಿ ಸರಿಯಾದ ನಡೆ-ನುಡಿಯಿಂದ ಬದುಕಬೇಕು” ಎಂದು ಕರೆ ನೀಡಿದರು. ಅವರು ದೇವಾಲಯ ನಿರ್ಮಾಣಕ್ಕೆ ಜಾಗ ನೀಡಿದ ಸುಜಾತ ಲೇಟ್ ನಟರಾಜು ಕುಟುಂಬವನ್ನು ಸ್ಮರಿಸಿದರು.

ಆದಿ ಜಾಂಬವ ಮಠದ ಷಡಕ್ಷರಿ ಮಹಾಸ್ವಾಮೀಜಿ ಮಾತನಾಡಿ, “ಸಮಾಜದ ಮುಖ್ಯವಾಹಿನಿಗೆ ಬಾರದ ಸಮುದಾಯಗಳು ಆಧ್ಯಾತ್ಮವನ್ನು ಹೆಚ್ಚು ನಂಬುತ್ತವೆ. ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆ ಬೇಡ. ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ಶಾಲೆಯ ಗಂಟೆ ದೇವಸ್ಥಾನದ ಗಂಟೆಗಿಂತ ಹೆಚ್ಚಾಗಿ ಕೇಳಿಸಬೇಕು. ಶಿಕ್ಷಣವೇ ಮೋಸಕ್ಕೆ ಅವಕಾಶವಿಲ್ಲದ ದಾರಿ” ಎಂದರು. ಅವರು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಟೇಲ್ ಹಿತೇಶ್, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, “ಚೇಳೂರು ದೇವತೆಗಳ ನಾಡು. ಇಲ್ಲಿ 101 ದೇವಾಲಯಗಳಿವೆ. ಈರಮಾಸ್ತಮ್ಮ ದೇವಿ ದೇವಾಲಯ ಸಮುದಾಯದ ದಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಂಡಿದೆ. ಒಗ್ಗಟ್ಟಿನಿಂದ ಗ್ರಾಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು: ಮಾಜಿ ಗ್ರಾ.ಪಂ. ಅಧ್ಯಕ್ಷ ಸಿಎಂ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಸಿದ್ದರಾಜು, ವಿಜಯಕುಮಾರ್, ಚೇಳೂರು ಶಿವನಂಜಪ್ಪ, ಬಸವರಾಜು, ಮೋಹನ್ ಕುಮಾರ್, ಲಿಂಗರಾಜು, ಅಮಾನಿಕೆರೆ ಬಸವರಾಜು, ಲಕ್ಕೆನಹಳ್ಳಿ ನರಸಿಯಪ್ಪ, ಪಟೇಲ್ ಬಸವರಾಜು, ತಿಮ್ಮಯ್ಯ, ಕಲಾವಿದ ನರಸಿಂಹಮೂರ್ತಿ, ನಲ್ಲೂರ ಶಿವಣ್ಣ, ಪ್ರಾಂಶುಪಾಲ ದೇವರಾಜು, ರಂಗಸ್ವಾಮಯ್ಯ, ವೆಂಕಟೇಶ್, ಮಾದೇವಯ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

WhatsApp Image 2025-06-21 at 19.57.59
Trending Now