
ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ಇರುವ ವಾಟೆವಳೆ ಜಲಾಶಯ ಈ ವರ್ಷ ಮುಂಗಾರು ಬೇಗ ಪ್ರಾರಂಭ ವಾದ ಕಾರಣ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಜಲಾಶಯ ಭರ್ತಿ ಯಾಗಿದ್ದು ಇಂದು ಆಲೂರು ಸಕಲೇಶಪುರ ಕಟ್ಟಾಯ ಭಾಗದ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಬಾಗಿನ ಅರ್ಪಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಆಲೂರು ಭಾಗಕ್ಕೆ ಈ ಜಲಾಶಯ ಜೀವ ನಾಡಿಯಾಗಿದ್ದು ಸುಮಾರು 10 ಸಾವಿರ ಹೆಕ್ತೇರ್ ಗೆ ನೀರು ಕೊಡುವಷ್ಟು ಸಾಮರ್ಥ್ಯ ಹೊಂದಿದ್ದು. ಆದರೆ ನಾಲೆ ಯನ್ನು ಸ್ವಚ್ಛ ಗೊಳಿಸದ ಕಾರಣ ಇಂದು ಸುಮಾರು 2 ಸಾವಿರ ಹೆಕ್ತೇರ್ ಗೆ ಮಾತ್ರ ನೀರು ಹರಿಸಲು ಸಾಧ್ಯ ವಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಈ ಕುರಿತಂತೆ ಮೇಲಮಟ್ಟದಲ್ಲಿ ನಾನು ಕೆಲಸ ಮಾಡಿ ಸಂಪೂರ್ಣ ಭಾಗಕ್ಕೆ ನೀರು ಹರಿಸಲು ಮತ್ತು ರೈತರಿಗೆ ಸಹಕಾರಿ ಯಾಗಲು ಶ್ರಮಿಸುತ್ತೇನೆ ಎಂದು ಹೇಳಿದರು ಕಾರ್ಯಕ್ರಮ ದಲ್ಲಿ ಬಿ ಜೆ ಪಿ ಮುಖಂಡರಾದ ಕಣಗಾಲ್ ಲೋಕೇಶ್.ಜೆ ಸಿ ಪಿ ರವಿ. ವೆಂಕಟೇಶ್. ಹರೀಶ್. ತೀರ್ಥಶ್. ಸಿಮೆಂಟ್ ಮಂಜುನಾಥ್ ರವರ ಪತ್ನಿ ಪ್ರದೀಪ.ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು
ವರದಿ : ಯೂಗೀಶ್ ಹಾಸನ ಜಿಲ್ಲಾ