September 10, 2025
sathvikanudi - ch tech giant

ತುಮಕೂರು ಅರಣ್ಯಧಿಕಾರಿಗಳ  ಮಿಂಚಿನ ಕಾರ್ಯಾಚರಣೆ, 1 ಟನ್ ರಕ್ತ ಚಂದನ ವಶ….

Spread the love

ಮಂಗಳವಾರ, ತುಮಕೂರು ನಗರ ಹೊರವಲಯದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು 1 ಟನ್ ರಕ್ತಚಂದನ ಮರದ 14 ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ತುಂಡುಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.



ಈ ರಕ್ತಚಂದನ ಸಾಗಿಸುತ್ತಿದ್ದ ಟಾಟಾ ಏಸ್ ka45 6234 ವಾಹನದ ಚಾಲಕ, ಕೇರಳದ ನಿವಾಸಿ ಇಬ್ರಾಹಿಂ (33) ಅನ್ನು ಬಂಧಿಸಲಾಗಿದೆ. ಈ ವಾಹನ ದಾಬಸ್‌ಪೇಟೆಯಿಂದ ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಾಗಿಸುತ್ತಿದ್ದಾಗ, ತಪಾಸಣೆಗೆ ಮುಂದಾದ ಇಲಾಖೆ ಸಿಬ್ಬಂದಿ ಕೇಶವಮೂರ್ತಿಯಿಂದ ರಕ್ತ ಚಂದನ ಪತ್ತೆ.
ತಪಾಸಣೆಗೆ ಮುಂದಾದಾಗ ಚಾಲಕ ಸೇರಿ ಇಬ್ಬರು ವಾಹನ ಬಿಟ್ಟು
ಪರಾರಿಯಾಗಿ ಚರಂಡಿಯಲ್ಲಿ ಅವಿತು ಕುಳಿತಿದ್ದ
ಚಾಲಕ ಇಬ್ರಾಹಿಂನನ್ನು ತನ್ನ ಪ್ರಾಣವನ್ನು ಪನಕಿಟ್ಟು ಬೆನ್ನಟ್ಟಿ ಹಿಡಿದ ಟೌನ್ ಫಾರೆಸ್ಟ್ ಕೇಶವಮೂರ್ತಿಯವರು  ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರಕ್ತ ಚಂದನ ಮರಗಳ್ಳರನ್ನು ಇಡಿಯಲು ಯಸಸ್ವಿಯಾಗಿದ್ದಾರೆ.



ಪತ್ತೆಯಾದ ರಕ್ತಚಂದನ ತುಂಡುಗಳು ಅಧೀಕ್ಷಣೆಯಲ್ಲಿದ್ದು, ದೃಢ ಮಾಹಿತಿ ಪಡೆಯಲು ದಾಬಸ್‌ಪೇಟೆ ಮತ್ತು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರಿಶೀಲನೆ ನಡೆಯುತ್ತಿದೆ. ‘ಈ ರಕ್ತಚಂದನವು ಎಲ್ಲಿಂದ ಸರಬರಾಜು ಮಾಡಲಾಗುತ್ತಿತ್ತು ಮತ್ತು ಎಲ್ಲಿಗೆ ಸಾಗಿಸುತ್ತಿತ್ತು ಎಂಬುದನ್ನು ತಿಳಿಯಬೇಕಾಗಿದೆ. ಆತನ ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ವಿ. ಪವಿತ್ರಾ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಪವಲಯದಲ್ಲಿ ಅರಣ್ಯಾಧಿಕಾರಿ ಅನಿಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಮಾಲಗತ್ತಿ, ಟೌನ್ ಫಾರೆಸ್ಟ್ ಕೇಶವಮೂರ್ತಿ, ಶಿವಲಿಂಗಸ್ವಾಮಿ, ರಾಘವೇಂದ್ರ, ನವೀನ್, ರಬ್ಬಾನಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

WhatsApp Image 2025-06-21 at 19.57.59
Trending Now