September 10, 2025
sathvikanudi - ch tech giant

ಹಾಸನದಲ್ಲಿ ‘ಹೃದಯಾಘಾತಕ್ಕೆ’ ಒಂದುವರೆ ತಿಂಗಳ ಬಾಣಂತಿ ಬಲಿ!?

Spread the love



ಹಾಸನ : ಹಾಸನದಲ್ಲಿ ದಿನೇ ದಿನೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ತಾನೆ ಹೃದಯಾಘಾಟಕ್ಕೆ ಹಾಸನ ಜಿಲ್ಲೆಯ ಒಂದರಲ್ಲಿ ಐವರು ಸಾವನಪ್ಪಿದ್ದರು. ಇದೀಗ ಹಾಸನ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ತಾನೇ ಯುವಕನೊಬ್ಬ ಸಾವನಪ್ಪಿದ್ದು, ಇದೀಗ ಒಂದುವರೆ ತಿಂಗಳ ಬಾಣಂತಿ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೌದು…. ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಒಂದೂವರೆ ತಿಂಗಳ ಬಾಣಂತಿ ಸಾವನನಪ್ಪಿದ್ದಾರೆ. ಬಾಣಂತನಕ್ಕೆ ಆಯನೂರು ಗ್ರಾಮದ ತವರು ಮನೆಯಲ್ಲಿದ್ದ ಅಕ್ಷಿತಾ (22) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದ ಕೊಮ್ಮೆನಹಳ್ಳಿಯ ಒಂದುವರೆ ತಿಂಗಳ ಬಾಣಂತಿ ಅಕ್ಷಿತ ಇದೀಗ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಐನೂರು ಗ್ರಾಮದಲ್ಲಿ ಅಕ್ಷಿತ ಸಾವನ್ನಪ್ಪಿದ್ದಾರೆ.

ಬಾಣಂತಕ್ಕೆ ಅಕ್ಷಿತ ಅವರು ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ತವರು ಮನೆಯಲ್ಲಿ ಇದ್ದರು. ಇವರು ಹಾಸನದ ಕೊಮ್ಮೇನಹಳ್ಳಿಯ ನಿವಾಸಿಯಾಗಿದ್ದು, ಹೆರಿಗೆ ಬಳಿಕ ತವರಿಗೆ ತೆರಳಿದ್ದರು. ಮೊನ್ನೆ ರಾತ್ರಿ ಅಕ್ಷಿತಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೊಮ್ಮೇನಹಳ್ಳಿ ಗ್ರಾಮದಿಂದ ಅಕ್ಷಿತಾ ತಮ್ಮ ಪತಿಯನ್ನು ಕರೆಸಿಕೊಂಡಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ಕರೆದೋಯ್ಯುವಾಗಲೇ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ವರದಿ :yogesh ಹಾಸನ

WhatsApp Image 2025-06-21 at 19.57.59
Trending Now