March 3, 2026
Spread the love

ದಾವಣಗೆರೆ :


ಯಶವಂತಪುರ ಎಕ್ಸ್’ಪ್ರೆಸ್ ರೈಲಿನಲ್ಲಿ  ಪ್ರಯಾಣಿಸಿದ್ದ ಯುವತಿಯೋರ್ವಳು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


ದಾವಣಗೆರೆ (davanagere) ಜಿಲ್ಲೆ ನ್ಯಾಮತಿ (nyamathi) ತಾಲೂಕಿನ ಸುರಹೊನ್ನೆ ಗ್ರಾಮ ಶಾಂತಿನಗರದ ನಿವಾಸಿ ಐಶ್ವರ್ಯ (19) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ (bengaluru) ಹೋಂ ನರ್ಸಿಂಗ್ (home nursing) ಕೆಲಸ ಮಾಡುತ್ತಿದ್ದರು.

ಮೇ 15 ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ (shimoga railway station) ಯಶವಂತಪುರಕ್ಕೆ ಹೋಗುವ ಎಕ್ಸ್’ಪ್ರೆಸ್ ರೈಲಿನಲ್ಲಿ (train) ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಸ್ಥಳಕ್ಕೆ ತೆರಳದೆ ಕಣ್ಮರೆಯಾಗಿದ್ದಾರೆ.

ಸದರಿ ಯುವತಿಯ ಕುರಿತಂತೆ ಯಾವುದೇ ಮಾಹಿತಿ, ಸುಳಿವು ಲಭ್ಯವಾಗಿಲ್ಲ. ಮೊಬೈಲ್ ಪೋನ್ (mobile phone) ಕೂಡ ಸ್ವಿಚ್ ಆಫ್ ಆಗಿದ್ದು, ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಯುವತಿಯ ಸುಳಿವು ಕಂಡುಬಂದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ, ದೂ.ಸಂ.: 08182-222974 / 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ (police sub inspector) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *