September 9, 2025
sathvikanudi - ch tech giant

ಶಿವಮೊಗ್ಗದಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ!?

Spread the love





ಶಿವಮೊಗ್ಗದಲ್ಲಿ ‘ಮನೆ ಮನೆಗೆ ಪೊಲೀಸ್’ ಎಂಬ ಜನಪರ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು. ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರೊಂದಿಗೆ ಸ್ನೇಹಪೂರ್ಣ ಸಂಬಂಧ ಬೆಸೆದು ಸೌಹಾರ್ದ ಸಮಾಜ ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನ್ಯಾ. ಮಂಜುನಾಥ್ ನಾಯಕ್ ಅವರು ಮಾತನಾಡುತ್ತಾ, “ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು. ಜನರು ಕೂಡ ಪೊಲೀಸರೊಂದಿಗೆ ಸಹಕರಿಸಬೇಕು. ಇದು ಶ್ರೇಷ್ಠ ಸೇವಾ ಪರಿಕಲ್ಪನೆಯಾಗಿದೆ” ಎಂದು ಹೇಳಿದರು.

ನಗರ ರಾಮನ್ ಶೆಟ್ಟಿ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪೊಲೀಸರಿಂದ ನಡೆಸುತ್ತಿದ್ದಾರೆ. ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಹಿಂಜರಿಯುವ ಪರಿಸ್ಥಿತಿಯಲ್ಲಿ, ಪೊಲೀಸರು ಅವರ ಮನೆ ಬಾಗಿಲಿಗೆ ಬಂದು, ನೇರವಾಗಿ ಅವರ ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುವುದು ಜನ ಸ್ನೇಹಿ ಆಡಳಿತದ ಸುಂದರ ಉದಾಹರಣೆಯಾಗಿದೆ.

ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಇರುವ ಹೆದರಿಕೆಯನ್ನು ತೊಲಗಿಸುವ ಉದ್ದೇಶವನ್ನೂ ಈ ಕಾರ್ಯಕ್ರಮ ಹೊಂದಿದೆ. ಸಮವಸ್ತ್ರ ಧರಿಸಿ, ಮನೆ ಮನೆಗೆ ಬೇಟಿ ನೀಡುವ ಸಿಬ್ಬಂದಿಗಳು ಮಕ್ಕಳೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಬೇಕು ಎಂಬ ನಿರ್ದೇಶನವಿದೆ. ಈ ಮೂಲಕ ಅವರು ನಂಬಿಕೆ ಗಳಿಸಿ, ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧರಾಗಿದ್ದಾರೆ.

ಸಭೆಯಲ್ಲಿ ನ್ಯಾ. ಮಂಜುನಾಥ್ ನಾಯಕ್ ಅವರು, “ಸಾರ್ವಜನಿಕರು ಪೊಲೀಸರ ಸಲಹೆ ಸೂಚನೆಗಳನ್ನು ಗೌರವದಿಂದ ಪಾಲಿಸಬೇಕು. ಕಾನೂನು ಶಿಸ್ತು ಕಾಪಾಡುವುದಲ್ಲದೇ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.

ವರದಿ: ✍🏻ರಮೇಶ್ ಡಿಜಿ, ಆನಂದಪುರ, ಶಿವಮೊಗ್ಗ

WhatsApp Image 2025-06-21 at 19.57.59
Trending Now