
ಬೆಂಗಳೂರು: 2024ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ಪ್ರಶಸ್ತಿಗೆ 197 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ, ಸರ್ಕಾರವು ಮುಖ್ಯಮಂತ್ರಿಯವರ ಪದಕ ನಿಯಮಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದ ಅಧಿಕಾರಿಗಳಿಗೆ ಈ ಗೌರವ ನೀಡಲು ಅನುಮೋದನೆ ನೀಡಿದೆ.
ಈ ಪೈಕಿ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲೂಕಿನ, ಹೊನ್ನಾಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಶ್ರೀ ಸಂಜೀವ್ ಕುಮಾರ್ ರವರಿಗೆ ಈ ಪ್ರತಿಷ್ಠಿತ ಪದಕವನ್ನು ನೀಡಲಾಗಿದೆ. ಅವರ ಸೇವಾ ಮನೋಭಾವನೆ, ಕಠಿಣ ಪರಿಶ್ರಮ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ಶ್ರೇಷ್ಟ ಕಾರ್ಯಕ್ಕೆ ಈ ಗೌರವ ಲಭಿಸಿದೆ. ಈ ಘೋಷಣೆಯಿಂದ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಲ್ಲಿ ಹರ್ಷದ ಸಂಭ್ರಮವಿದೆ.
ಇದೇ ಸಂದರ್ಭ, ಕಾರ್ಯನಿರತ ಪತ್ರಕರ್ತರ, ಸಂಪಾದಕರು ಹಾಗೂ ವರದಿಗಾರರ ಸಂಘ(ರಿ).ಬೆಂಗಳೂರು ವಿಭಾಗೀಯ ಅಧ್ಯಕ್ಷರಾದ ವಿಜಯ್ ಮುನಿಯಪ್ಪ, ಅವರು ಸಂಜೀವ್ ಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಮಾಜಕ್ಕೆ ನೀಡಿದ ಅವಿಸ್ಮರಣೀಯ ಸೇವೆಗಾಗಿ ಈ ಪದಕ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಪದಕ ಪಡೆದಿರುವ ಎಲ್ಲ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹಾರ್ದಿಕ ಅಭಿನಂದನೆಗಳು. ಅವರ ಸೇವಾ ಸಮರ್ಪಣೆಯು ಮುಂದೆಯೂ ರಾಜ್ಯದ ಪೊಲೀಸ್ ಇಲಾಖೆಗೆ ಮಾದರಿಯಾಗಿರಲಿ.