September 10, 2025
sathvikanudi - ch tech giant

ಆಲೂರು ತಾಲ್ಲೂಕಿನಲ್ಲಿ 1964ನೇ ಮದ್ಯವರ್ಜನ ಶಿಬಿರ ಉದ್ಘಾಟನೆ!?

Spread the love





ಆಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿಜಿಸ್ಟರ್) ಆಲೂರು ತಾಲ್ಲೂಕು ಘಟಕದ ವತಿಯಿಂದ, ಶ್ರೀ ವೀರಶೈವ ಸಮುದಾಯ ಭವನದಲ್ಲಿ 1964ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಭವ್ಯವಾಗಿ ಜರುಗಿತು



ಕಾರ್ಯಕ್ರಮಕ್ಕೆ ವೀರಶೈವ ಸಮಾಜ ಆಲೂರಿನ ಅಧ್ಯಕ್ಷರಾದ ಶ್ರೀ ರೇಣುಕಾ ಪ್ರಸಾದ್ ಅಧ್ಯಕ್ಷತೆ ವಹಿಸಿದರು.
ತಾಲೂಕು ತಹಶೀಲ್ದಾರರಾದ ಶ್ರೀ ಮಲ್ಲಿಕಾರ್ಜುನ್ ಶಿಬಿರವನ್ನು ಉದ್ಘಾಟಿಸಿ, ಸಮಾಜ ಸೇವೆ ಹಾಗೂ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಧರ್ಮಸ್ಥಳ ಯೋಜನೆ ನೀಡುತ್ತಿರುವ ಕೊಡುಗೆಯನ್ನು ಮೆಚ್ಚಿದರು.

ಜನಜಾಗೃತಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಖೇಶ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು.
ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರದ ಉದ್ದೇಶ ಹಾಗೂ ಕಾರ್ಯಕ್ರಮದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.



ಕಾರ್ಯಕ್ರಮದಲ್ಲಿ ಶ್ರೀ ದೇವರಾಜ್ (ಎಎಸ್‌ಐ, ಆಲೂರು ಪೊಲೀಸ್ ಠಾಣೆ), ಶ್ರೀ ಸುಬ್ರಮಣ್ಯ ಶರ್ಮ (ಕಾರ್ಯನಿರ್ವಹಣಾ ಅಧಿಕಾರಿಗಳು, ತಾಲೂಕು ಪಂಚಾಯತ್, ಆಲೂರು), ಶ್ರೀ ಜಯಣ್ಣ (ಉಪಾಧ್ಯಕ್ಷ, ವೀರಶೈವ ಸಮಾಜ, ಆಲೂರು), ಶ್ರೀ ಧರ್ಮರಾಜ್, ಶ್ರೀ ಮಲ್ಲಿಕಾರ್ಜುನ್, ಶ್ರೀ ಮೋಹನ್ ಕುಮಾರ್, ಶ್ರೀ ಬಾಲಕೃಷ್ಣ ಎಂ. ಶೆಟ್ಟಿ, ಶ್ರೀ ಎಂ.ಕೆ. ರಾಜಶೇಖರ್ (ಸದಸ್ಯರು, ಜಿಲ್ಲಾ ಜನಜಾಗೃತಿ ವೇದಿಕೆ, ಹಾಸನ) ಸೇರಿದಂತೆ ನವಜೀವನ ಸಮಿತಿಯ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.

ಶಿಬಿರಾಧಿಕಾರಿಗಳಾದ ದೇವಿ ಪ್ರಸಾದ್ ಸುವರ್ಣ ಹಾಗೂ ಜಯಾನಂದ, ಆರೋಗ್ಯ ಕಾರ್ಯಕರ್ತೆಯಾದ ಶ್ರೀಮತಿ ಜಯಲಕ್ಷ್ಮಿ, ಜನಜಾಗೃತಿ ಮೇಲ್ವಿಚಾರಕರಾದ ವಸಂತ, ತಾಲೂಕು ಕ್ಷೇತ್ರ ಯೋಜನಾಧಿಕಾರಿಗಳಾದ ರತ್ನಾಕರ್ ಕೊಠಾರಿ ಅತಿಥಿಗಳನ್ನು ಸ್ವಾಗತಿಸಿದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ವಿಘ್ನೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ವಲಯ ಮೇಲ್ವಿಚಾರಕರಾದ ಶ್ರೀಮತಿ ಯಶೋಧ ವಂದನಾರ್ಪಣೆ ಸಲ್ಲಿಸಿದರು.

WhatsApp Image 2025-06-21 at 19.57.59
Trending Now