September 9, 2025
sathvikanudi - ch tech giant

ಮಾನಸಿಕ ಅಸ್ವಸ್ಥನ ದಾರುಣ ಅಂತ್ಯ: ಚಾಕುವಿನಿಂದ ಕತ್ತು ಕೊಯ್ದು ಆತ್ಮಹತ್ಯೆ..!

Spread the love


ಪಾವಗಡ: ಪಾವಗಡ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.

ಗ್ರಾಮದ 40 ವರ್ಷದ ಹನುಮಂತರಾಯಪ್ಪ ಕಳೆದ ಐದು–ಆರು ತಿಂಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದರು. ಆತ್ಮಹತ್ಯೆ ಯತ್ನಿಸಿರುವ ಘಟನೆಗಳು ಹಿಂದೆ ಹಲವಾರು ಬಾರಿ ನಡೆದಿದ್ದು, ಈ ಕಾರಣದಿಂದ ಕುಟುಂಬಸ್ಥರು ಆತನನ್ನು ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು.

ಆದರೆ, ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಮನೆಯವರು ಗಮನಿಸದ ವೇಳೆಯಲ್ಲಿ ಹನುಮಂತರಾಯಪ್ಪ ಮನೆಯನ್ನು ಬಿಟ್ಟು ಓರಗೆ ಹೋಗಿ , ಚಾಕುವೊಂದನ್ನು ಕೈಯಲ್ಲಿ ಹಿಡಿದು ಗ್ರಾಮದ ಹೊರವಲಯದ ಮೆಕ್ಕೆಜೋಳ ತೋಟಕ್ಕೆ ತೆರಳಿದ್ದ. ಅಲ್ಲೆ ತನ್ನ ಕತ್ತನ್ನು ತಾನೇ ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ.

ಗ್ರಾಮಸ್ಥರು ತಕ್ಷಣ ಆತನನ್ನು ಪಾವಗಡದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯದಲ್ಲಿ ಮಡಕಶಿರಾ ಸಮೀಪದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿದೆ.

ಪಾವಗಡ ಠಾಣೆ ಎಸ್‌ಐ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆದಿದೆ.

WhatsApp Image 2025-06-21 at 19.57.59
Trending Now