September 10, 2025
sathvikanudi - ch tech giant

ಕಳ್ಳರಿಂದನೆ 300grm ಚಿನ್ನ ಲಪಾಟಾ ಯಿಸಿದ ಹೆಡ್ ಕಾನ್‌ಸ್ಟೆಬಲ್….!?

Spread the love

ಮೈಸೂರು ನಗರದ ಅಶೋಕಪುರಂ ಠಾಣೆಯ ವ್ಯಾಪ್ತಿಯಲ್ಲಿ ಜೂನ್ ತಿಂಗಳಿನಲ್ಲಿ ಪ್ರಕರಣ ಧಾಖಲಾಗಿದ್ದು ಆ ಪ್ರಕಾರಣದ ತನಿಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ರಾಜು ಎಂಬುವರ ವಿರುದ್ಧ 300 ಗ್ರಾಂ ಚಿನ್ನಾಭರಣ ಪಡೆಯುವ ಆರೋಪವು ಕೇಳಿ ಬಂದಿದೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಜರುಲ್ಲಾ ಬಾಬು ಮತ್ತು ಅಲೀಮ್‌ ಅವರನ್ನು ಬಂಧಿಸಲಾಗಿದ್ದು, ಅವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ತನಿಖೆ ವೇಳೆ ಅವರು 400 ಗ್ರಾಂ ಚಿನ್ನಾಭರಣ ಕಳ್ಳತನ ಮಾಡುವುದರಲ್ಲಿ ಭಾಗಿಯಾಗಿದ್ದು, ಅದರಲ್ಲಿ 300 ಗ್ರಾಂ ಅನ್ನು ಹೆಡ್ ಕಾನ್‌ಸ್ಟೆಬಲ್ ರಾಜು ಪಡೆದಿರುವುದಾಗಿ ತಿಳಿಸಿದ್ದಾರೆ.

ಈ ಘಟನೆಯು ಬೇಲಿಯೇ ಎದ್ದು.! ಹೊಲ ಮೇಯಿದಂತೆ.!? ಎಂಬ ಗಾದೆ ಮಾತು ನೆನಪಿಸುತ್ತದೆ. ಅರ್ಥಾತ್,ಅಧಿಕಾರಿಗಳ ದುರುಪಯೋಗದಿಂದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯು ಪ್ರತಿಯೊಬ್ಬ  ನಾಗರಿಕರ ಪಾಲಿಗೆ  ಅಸಮಾದಾನವಾದ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಭವವು ಸುಚಿಸುತ್ತಿದೆ.

ಈಗ, ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಏನೇನು ಕ್ರಮ ನಡೆಯುವುದು ಎಂಬುದನ್ನು ಗಮನಿಸಬೇಕಾಗಿದೆ. ಮುಖ್ಯಪೇದೆ ರಾಜು ವಿರುದ್ಧ ನ್ಯಾಯಾoಗ ವ್ಯವಸ್ಥೆಯಲ್ಲಿ ತನಿಖೆ ನಡೆಸುವುದು, ಇದರಿಂದಾಗಿ ಯಾವುದೇ ತಪ್ಪಿತಸ್ಥರನ್ನು ಕಠಿಣ ಶಿಕ್ಷೆ ನೀಡುವುದು, ಹಾಗೂ ಅಧಿಕಾರದ ದುರುಪಯೋಗ ತಡೆಯುವುದು ಮುಖ್ಯವಾಗಿದೆ. ಕಾನೂನು ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುವುದರ ಮೂಲಕ, ಈ ರೀತಿಯ ದುರುಪಯೋಗಗಳನ್ನು ತಪ್ಪಿಸಬೇಕು ಮತ್ತು ನ್ಯಾಯವನ್ನು ಸಾಧಿಸಬೇಕು.

ಇಂತಹ ಪ್ರಕರಣಗಳು ಕಾನೂನಿನ ನ್ಯಾಯತತ್ವವನ್ನು ಕೊಂದು  ಹಾಕಬಾರದು, ಹಾಗಾಗಿ ಸರಿಯಾದ ನ್ಯಾಯಾಲಯದಲ್ಲಿ ಕಾನೂನು ಕ್ರಮಗಳು ಜರುಗಬೇಕು ಮತ್ತು ಕಾನೂನು ಬದ್ಧವಾಗಿ ಅಧಿಕಾರಿಗಳ ಶಿಸ್ತನ್ನು ಕಾಪಾಡಬೇಕು. ಈ ತರದವರ ವಿರುದ್ಧ ಸಂಬಂಧ ಪಟ್ಟ ನಿಷ್ಠಾವಂತ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವದರಿಂದ ಕಾನೂನು ವ್ಯವಸ್ಥೆ ಕಾಪಾಡುವುದರ ಜೊತೆಗೆ ಈ ಘಟನೇ ಮರುಕಲಿಸದಂತೆ ಕಾಪಾಡಭವುದಾಗಿದೆ.

WhatsApp Image 2025-06-21 at 19.57.59
Trending Now