October 24, 2025
sathvikanudi - ch tech giant

ಶ್ರೀಗಂಧ ಕಳ್ಳತನದ ಆರೋಪಿಯನ್ನ 34 ವರ್ಷಗಳ ನಂತರ ಬಂಧನ……..!?

Spread the love

ಶಿವಮೊಗ್ಗ :

ಕಳೆದ 34 ವರ್ಷಗಳ ಹಿಂದಿನ ಶ್ರೀಗಂಧ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೋಲಿಸ್ ಠಾಣೆಯ ಲಿಮಿಟ್ಸ್‌ನಲ್ಲಿ ಆರೋಪಿ ಚಿನ್ನವಾಡು (55) ಎಂಬಾತನನ್ನು ಹೊಳೆಹೊನ್ನೂರು ಪೋಲಿಸ್ ಇನ್ಸೆಕ್ಟರ್ ಆರ್.ಎಲ್. ಲಕ್ಷ್ಮೀಪತಿ ನೇತೃತ್ವದ ತಂಡ ಬಂಧಿಸಿದೆ. ಹೊಳೆಹೊನ್ನೂರು ಪಟ್ಟಣದ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್‌ನ ನಿವಾಸಿಯಾದ ಚಿನ್ನವಾಡು, 34 ವರ್ಷಗಳ ಹಿಂದೆ ನಡೆದ ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ.

ಈ ಪ್ರಕರಣದಲ್ಲಿ ಚಿನ್ನವಾಡು ಬಹಳ ಕಾಲದಿಂದ ತಪ್ಪಿಸಿಕೊಂಡಿದ್ದಾನೆ. ಇತ್ತೀಚಿಗೆ ಸ್ವಾತಂತ್ರ್ಯ ದಿನದ ಸಮಯದಲ್ಲಿ ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಅವನನ್ನು ಬಂಧಿಸಲು ಉಡುಪಿ ಹಾಗೂ ಹೊಳೆಹೊನ್ನೂರು ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾತನಾಡಿ, ಇಷ್ಟು ವರ್ಷಗಳ ನಂತರವೂ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಇದು ಪೊಲೀಸರು ಪ್ರಕರಣವನ್ನು ಆಲಸ್ಯದಿಂದ ನಡೆಸುವುದಿಲ್ಲ ಎಂಬುದಕ್ಕೆ ಉದಾಹರಣೆ ಎಂದು ಜನರಲ್ಲಿ ಭರವಸೆ ಹುಟ್ಟಿಸುತ್ತಿದೆ.

WhatsApp Image 2025-06-21 at 19.57.59
Trending Now