September 10, 2025
sathvikanudi - ch tech giant

ಕಾಳಗಿಯಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ತಾಲೂಕು ಸಮಿತಿ ರಚನೆ..!?

Spread the love

ಕಾಳಗಿ (ಕಲಬುರ್ಗಿ): ಭೀಮವಾದ ದಲಿತ ಸಂಘರ್ಷ ಸಮಿತಿಯ (BDS) ತಾಲೂಕು ಸಮಿತಿ ರಚನೆಯು ಇಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಶ್ರೀ ಬಿ.ಎನ್. ವೆಂಕಟೇಶ್ ಹಾಗೂ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಅಣ್ಣಾ ಸಿಂಗೆಯವರ ನೇತೃತ್ವದಲ್ಲಿ ನಡೆಯಿತು. ಈ ಸಮಾರಂಭವು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಸಂಜೀವ ಕಾಂಬಳೆ, ಜಿಲ್ಲಾ ಸಂಚಾಲಕರಾದ ಶ್ರೀ ಶ್ಯಾಮರಾವ್ ಹೆರೂರ, ಮಡಿವಾಳಪ್ಪ ನಿಂಬರಗಿ ಮತ್ತು ಪ್ರಿಯದರ್ಶಿನಿ ಉಪಸ್ಥಿತರಿದ್ದರು. ಹೊಸ ತಾಲೂಕು ಸಮಿತಿಯಲ್ಲಿ ಮಾರುತಿ ಅವರನ್ನು ಕಾಳಗಿ ತಾಲೂಕು ಸಂಚಾಲಕರಾಗಿ ನೇಮಕ ಮಾಡಲಾಯಿತು.

ಸಭೆಯಲ್ಲಿ ದಲಿತ ಹಕ್ಕುಗಳ ಬಗ್ಗೆ ಚರ್ಚೆ ನಡೆಸಲಾಯಿತು ಮತ್ತು ಭವಿಷ್ಯದಲ್ಲಿ ಸಮಿತಿಯ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಿತಿಯ ಮುಖಂಡರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಸಭೆಯು ದಲಿತ ಸಮುದಾಯದ ಹಕ್ಕುಗಳ ಉಳಿವು, ಸಾಮಾಜಿಕ ನ್ಯಾಯ, ಹಾಗೂ ಸಮಾನತೆಯ ಸಾಧನೆಯ ಕುರಿತಂತೆ ಸ್ಪಷ್ಟವಾದ ಸಂಕಲ್ಪವನ್ನು ಹೊರಹಾಕಿತು. ಕೊನೆಗೆ, ಭೀಮವಾದ ದಲಿತ ಸಂಘರ್ಷ ಸಮಿತಿಯ ಸಂಘಟನೆಗಳನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಇನ್ನಷ್ಟು ಬಲಪಡಿಸುವಂತೆ ಕರೆ ನೀಡಲಾಯಿತು.

WhatsApp Image 2025-06-21 at 19.57.59
Trending Now