September 10, 2025
sathvikanudi - ch tech giant

ಯಾಸಿನ್ ಗ್ಯಾಂಗ್ ಉಡುಪಿ ಜೈಲಿಗೆ ಶಿಫ್ಟ್.

Spread the love

Shimoga

ಶಿವಮೊಗ್ಗದ ಗ್ಯಾಂಗ್ ವಾರ್ ನಲ್ಲಿ ನಡೆದ ಮೂರು ಜನರ ಮರ್ಡರ್ ಪ್ರಕರಣದಲ್ಲಿ ಬಂಧಿತರಾದ ಇದುವರೆಗೂ 21 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿಸಲಾದ 21 ಜನರಲ್ಲಿ ಯಾಸಿನ್ ಖುರೇಷಿಯ ಗ್ಯಾಂಗ್ ನ್ನ ಉಡುಪಿ ಜೈ ಶಿಫ್ಟ್ ಮಾಡಲಾಗಿದೆ.

ಅದಿಲ್ ಪಾಶನ ಗ್ಯಾಂಗ್ ನ್ನ ಶಿವಮೊಗ್ಗದ ಜೈಲ್ ನಲ್ಲೇ ಇರಿಸಲಾಗಿದೆ. ಯಾಸಿನ್ ಗ್ಯಾಂಗ್ ನಲ್ಲಿ ಮೊಹ್ಮದ್ ರಿಜ್ವಾನ್ ಯಾನೆ ತೋತು, ಆರ್ಯನ್ ಖಾನ್, ಶಾಬಾಜ್ ಖಾನ್, ಅಜರ್, ಯಾಸಿನ್ ಯಾನೆ ಬ್ಯಾಟ್,

ಶೋಯೆಬ್ ಯಾನೆ ಡೇಂಜರ್, ಶೋಯೆಲ್ ಯಾನೆ ಕೊಂಗಾಟಿ, ರಿಜ್ವಾನ್ ಪಾಶರನ್ನ ಬಂಧಿಸಲಾಗಿತ್ತು. ಆದಿಲ್ ಪಾಶ ಗ್ಯಾಂಗ್ ನಲ್ಲಿ ಅದಿಲ್, ಶಕೀಬ್, ಸಗೀರ್, ಸಮೀರ್ ಯಾನೆ ಅಫು, ಇಬ್ರಾರ್ ಅಲಿ ಯಾನೆ ಇಬ್ರಾರ್,


ಇಮ್ರಾನ್ ಯಾನೆ ನಿಮ್ಮು, ಪರ್ವೇಜ್, ಪ್ರತಾಪ್ ಯಾನೆ ಅಣ್ಣ, ಸೇರಿದಂತೆ 13 ಜನರನ್ನ ಶಿವಮೊಗ್ಗ ಜೈಲಿನಲ್ಲೇ ಇರಿಸಲಾಗಿದೆ.  ಈ ಸಂಬಂಧ ಕೋಟೆ ಮತ್ತು ವಿವಿಧ ಠಾಣೆಗಳಲ್ಲಿ ಮೂರು ಎಫ್ಐಆರ್ ದಾಖಲಾಗಿದೆ. ಯಾಸಿನ್ ಖುರೇಶಿಯನ್ನ ಮರ್ಡರ್ ಮಾಡಿದಂತೆ ಮತ್ತೋರ್ವನನ್ನ ಕೊಲೆ ಮಾಡಲಾಗುವುದು ಎಂದು ಹೇಳಿಕೊಂಡು ಇಲಿಯಾಜ್ ನಗರದ ಚಹಾದ ಅಂಗಡಿ ಮುಂದೆ ಇಬ್ವರು ಪರಿಚಯಸ್ಥರ ಬಡುವೆ ನಡೆದ ಸಂಭಾಷಣೆಯೂ ಎಫ್ಐಆರ್ ಆಗಿದೆ.

WhatsApp Image 2025-06-21 at 19.57.59
Trending Now