
ಉಡುಪಿ ಜಿಲ್ಲೆ :
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ದಶಕಗಳಾದರೂ ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ಅನ್ಯಾಯಗಳು ನಿಲ್ಲುತ್ತಿಲ್ಲ ಎಂಬುದಕ್ಕೆ ಕರ್ನಾಟಕದ ಉಡುಪಿಯಲ್ಲಿ ನಡೆದ ಇನ್ನೊಂದು ಘಟನೆ ಸಾಬೀತಾಗಿದೆ. ಮಲ್ಪೆ ಬೀಚ್ ಬಳಿ, ಮೀನು ಕಳ್ಳತನ ಆರೋಪಿಸಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯ ವಿಡಿಯೋ ಹರಿದಾಡುತ್ತಿದ್ದಂತೆ ರಾಜ್ಯದ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ದಲಿತರಿಗೆ ಈ ದಿನವೂ ಮಾನವೀಯ ಹಕ್ಕುಗಳ ಉಲ್ಲಂಘನೆ ಸಾಮಾನ್ಯವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾಸ್ಕರ್ ಎಂಬ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣ ಇನ್ನೂ ತಣ್ಣಗಾಗುವ ಮುನ್ನವೇ, ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಇಂತಹ ಘಟನೆಗಳು ನಡೆಯುತ್ತಾ ಇದ್ದರೂ, ರಾಜ್ಯದ ರಾಜಕಾರಣಿಗಳು ಈ ಬಗ್ಗೆ ಮೌನ ವಹಿಸಿರುವುದು ಗಂಭೀರ ವಿಷಯವಾಗಿದೆ. ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಈ ಪ್ರಕರಣದ ಕುರಿತು ಮಾತಾಡಲು ನಿರಾಕರಿಸಿದ್ದು, ಅವರ ಈ ನಿಲುವು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದುತ್ವದ ಪರ ಧ್ವನಿ ಎತ್ತುವ ರಾಜಕಾರಣಿಗಳಿಗೆ ದಲಿತರು ಹಿಂದೂಗಳಾಗಿ ಕಾಣುತ್ತಿಲ್ಲವೆ? ಎಂಬ ಪ್ರಶ್ನೆ ವ್ಯಕ್ತವಾಗಿದೆ.
ಈ ನೀಚ ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಮಾತ್ರ ದಲಿತರ ಮತಕ್ಕೆ ಮನೆ ಮನೆಗೆ ಬಂದು ಕೈ ಚಾಚಿ ಭಿಕ್ಷುಟನೆ ಮಾಡುವಾಗ ನಾವೆಲ್ಲಾ ಒಂದೇ… ನಾವೆಲ್ಲಾ ಹಿಂದೂ… ಗಳು ಎಂದು ಘೋಷಣೆ ಕೂಗಿ ಮತ ಪಡೆಯುವಾಗ ದಲಿತರೆಲ್ಲಾ ಸಾಮಾನ್ಯರಾಗಿ ಕಾಣುತ್ತಾರೆ ಚುನಾವಣೆ ಮುಗಿದ ನಂತರ ಅವನು ಮೆಲ್ ಜಾತಿ, ಇವನು ಕೆಲ ಜಾತಿ, ಯಾಗಿ ಬದಲಾವಣೆ ಯಾಗುತ್ತರೆ ಇದು ನಮ್ಮ ರಾಜ್ಯ ರಾಜಕಾರಣಿಗಳ ನಿಜಾ ರೂಪಾ ವಾಗಿರುತ್ತದೆ.
ಸಾಮಾಜಿಕ ನ್ಯಾಯಕ್ಕಾಗಿ ದ್ವನಿಯೆತ್ತುವ ರಾಜಕೀಯ ನಾಯಕರು ಇಲ್ಲದಿರುವುದು ದುಃಖದ ಸಂಗತಿ. ದಲಿತರು ಇನ್ನೂ ಸಮಾನತೆಗಾಗಿ ಹೋರಾಡಬೇಕಾದ ಪರಿಸ್ಥಿತಿಯೇ ಬೇಸರದ ಸಂಗತಿ. ರಾಜ್ಯ ಸರ್ಕಾರ ಮತ್ತು ಪೊಲೀಸರ ಈ ಅವಮಾನಕಾರಿ ಘಟನೆಗಳ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ. ದಲಿತ ಸಂಘಟನೆಗಳು, ಮಾನವ ಹಕ್ಕುಗಳ ಹೋರಾಟಗಾರರು ಈ ಘಟನೆಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದಲಿತರ ಹಕ್ಕುಗಳ ಪರ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂಬುದು ಸಾಮಾಜಿಕ ಹೋರಾಟಗಾರರ ಒತ್ತಾಯವಾಗಿದೆ. ಇಲ್ಲವಾದರೆ, ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಮುಂದುವರಿಯುವ ಭೀತಿ ಇದೆ.
ವರದಿ :ಆರತಿ ಗಿಳಿಯಾರ್
:ಉಡುಪಿ ಜಿಲ್ಲೆ ಸುಶೀಲ ವಾಣಿ ವರದಿಗಾರರು