October 22, 2025
sathvikanudi - ch tech giant

ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ ಕಾರ್ಯಕ್ರಮ!?

Spread the love


ವರದಿ: ಮಂಜು ಗುರುಗದಹಳ್ಳಿ

ತಿಪಟೂರು: “ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ ಹಾಗೂ ದೇಶದ ಪ್ರಗತಿಗೆ ಮೌಲ್ಯಮಾಪನ ಕೊಡುಗೆ ನೀಡಿದ ಡಾ. ಬಾಬು ಜಗಜೀವನ್ ರಾಮ್ ಅವರ ಸೇವೆ ಅಪಾರ,” ಎಂದು ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಅವರು ಹೇಳಿದರು. ನಗರ ಪ್ರವಾಸಿ ಮಂದಿರದಲ್ಲಿ ಜಗಜೀವನ್ ರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.

ಅವರು ಮುಂದುವರೆದು, “ಜಗಜೀವನ್ ರಾಮ್ ಮೇಲು–ಕೀಳಿನ ತಾರತಮ್ಯ, ಜಾತಿ ಭೇದ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಧೀರ ನಾಯಕ. shೋಷಿತರ ಪರ ಧ್ವನಿ ಎತ್ತಿದ ಇವರು ಸಮಾಜದಲ್ಲಿ ಸಮತೆಯ ಬೆಳಕನ್ನು ತರಲು ಶ್ರಮಿಸಿದರು. ಅವರ ಮಾರ್ಗವನ್ನು ನಾವು ಅನುಸರಿಸಬೇಕು,” ಎಂದು ಅಭಿಪ್ರಾಯಪಟ್ಟರು.

ಆಶೋಕ್ ಗೌಡನಕಟ್ಟೆ ಮಾತನಾಡಿ, “ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಅವಧಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಜಗಜೀವನ್ ರಾಮ್ ಅವರು ನೀಡಿದ ಕೊಡುಗೆ ಅಪರೂಪದದು. ದಲಿತ ಸಮಾಜದ ಹಕ್ಕುಪೋಷಕರೆಂದು ಗುರುತಿಸಿಕೊಂಡ ಇವರು ದೇಶದ ಕೆಲವೇ ದಿಟ್ಟ ನಾಯಕರಲ್ಲಿ ಒಬ್ಬರು,” ಎಂದರು.

ತಾಲ್ಲೂಕು ಸಂಚಾಲಕ ಮಂಜುನಾಥ್ ಹರಚನಹಳ್ಳಿ ಅವರು ಮಾತನಾಡಿ, “ಜಗಜೀವನ್ ರಾಮ್ ಅವರ ಪ್ರಯತ್ನದಿಂದಲೇ ಭಾರತದಲ್ಲಿ ಹಸಿರು ಕ್ರಾಂತಿ ಸಾಧ್ಯವಾಯಿತು. ಆಹಾರದ ಕೊರತೆ ನಿವಾರಣೆಗೂ ಅವರು ಬುನಾದಿಯಾಗಿದ್ದರು. ಅವರು ದಲಿತರಷ್ಟೇ ಅಲ್ಲ, ಎಲ್ಲಾ ಸಮುದಾಯಗಳ ಹಿತದೃಷ್ಟಿಯಿಂದ ಕೆಲಸ ಮಾಡಿದ ಮಹಾನ್ ವ್ಯಕ್ತಿ,” ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಗದಾರಿಯಸ್ವಾಮಿ, ಎನ್.ಎಂ. ಮೈಲಾರಯ್ಯ, ಮಂಜು ಗುರುಗದಹಳ್ಳಿ, ಕರಿಕೆರೆ ಗಂಗಾಧರ್, ರಾಜಣ್ಣ ಗಂಗನಗಟ್ಟ, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಳುನೇರಲು, ರವಿ ಮಂಜುನಾಥಪುರ, ಪ್ರಸನ್ನಕುಮಾರ್, ನಂದಿನಿ ಕೆ.ಬಿ., ಲಕ್ಷ್ಮಮ್ಮ, ಗಂಗಾಮಣಿ, ಗಂಗಣ್ಣ ಇರಲಗೆರೆ, ಚಂದ್ರಶೇಖರ್ ಅಧಿನಾಯಕನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

WhatsApp Image 2025-06-21 at 19.57.59
Trending Now