
ಕೊಡವೂರು: ಶ್ರೀ ಅಪ್ಪಣ್ಣ ಪಂಜುರ್ಲಿ ದೈವಸ್ಥಾನ, ಕಂಗಣಬೆಟ್ಟು ಕೊಡವೂರಿನಲ್ಲಿ ಶ್ರೀ ದಿವಾಕರ್ ಶೆಟ್ಟಿ ಅವರ ಆಶ್ರಯದಲ್ಲಿ ನೆಮೋತ್ಸವ ಹಾಗೂ ಹರಕೆಯ ಕೋಲಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಈ ಪವಿತ್ರ ಸಂದರ್ಭದಲ್ಲಿ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಹಾಜರಾಗಿ ದೇವರ ಕೃಪೆಯನ್ನು ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೇಮ ಹಾಗೂ ಕೋಲಾ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ, ಭಕ್ತರು ಭಕ್ತಿಭಾವದಿಂದ ದೇವರ ಆಶೀರ್ವಾದ ಪಡೆದರು. ವಿಶೇಷ ಪೂಜೆ, ಹರಕೆ ಸಮರ್ಪಣೆ ಮತ್ತು ಭಜನೆಯೊಂದಿಗೆ ಕಾರ್ಯಕ್ರಮ ಭಕ್ತಿಮಯ ವಾತಾವರಣದಲ್ಲಿ ಸಾಗಿತು.
ಈ ಸಂದರ್ಭ ಶ್ರೀ ಪ್ರಸಾದ್ ರಾಜ್ ಕಂಚನ್ ಅವರು ಕೂಡ ಭಾಗವಹಿಸಿ ದೇವರ ಆಶೀರ್ವಾದ ಪಡೆದು, ಗಂಧ ಪ್ರಸಾದ ಸ್ವೀಕರಿಸಿದರು. ಭಕ್ತರ ಸಾಂಸ್ಕೃತಿಕ ಒಗ್ಗೂಡಿಸಿಕೊಡುವಂತಹ ಈ ಪವಿತ್ರ ಸಂದರ್ಭದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಾಯಿತು.
ವರದಿ: ಆರತಿ ಗಿಳಿಯಾರ್
ಉಡುಪಿ