September 9, 2025
sathvikanudi - ch tech giant

ತುಮಕೂರು ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ 1ಲಕ್ಷ ದಂಡ..!

Spread the love



ತುಮಕೂರು:

ಜಿಲ್ಲೆಯಲ್ಲಿ 17/11/2023ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, 376AB ಐಪಿಸಿ ಮತ್ತು 06 ಪಾಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸಿದ್ದಿಕಾ ಕೋಂ ಅಬ್ದುಲ್ ರಹೀಂ ನೀಡಿದ ದೂರಿನ ಹಿನ್ನೆಲೆಯಲ್ಲಿ, ಪಿ.ಎಸ್.ಐ ಪದ್ಮಾವತಿ ಅವರು ಪ್ರಕರಣವನ್ನು ಪ್ರಾರಂಭಿಸಿದ್ದರು.

ತದನಂತರ, ಠಾಣಾ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮೀ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಆರೋಪಿಯಾದ ಅಮ್ಮದ್ ಖಾನ್ @ ಅಮ್ಮದ್ (40 ವರ್ಷ, ವಾಸ: ಜೆ.ಎಸ್. ಪಾಳ್ಯ, ತುಮಕೂರು) ಅವರನ್ನು ಬಂಧಿಸಿ, ದೋಷಾರೋಪಣ ಪತ್ರ ಸಲ್ಲಿಸಲಾಯಿತು.

ಮಾನ್ಯ ತುಮಕೂರು ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸಂಧ್ಯಾ ರಾವ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಅಪ್ಪಟ ಸಾಕ್ಷಿಗಳ ಮೇರೆಗೆ ದಿ: 17/01/2025ರಂದು ನ್ಯಾಯಾಲಯವು ಆರೋಪಿಯನ್ನು 20 ವರ್ಷಗಳ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿತು.

ಈ ಯಶಸ್ವಿ ತೀರ್ಪಿನಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಆಶಾ ಅವರ ವಾದ ಪ್ರಮುಖವಾಗಿದ್ದು, ತನಿಖಾ ಸಹಾಯಕನಾಗಿ ನರಸಿಂಹಮೂರ್ತಿ ಕಾರ್ಯನಿರ್ವಹಿಸಿದರು. ಈ ಪ್ರಕರಣವು ನ್ಯಾಯಕ್ಕಾಗಿ ಹೋರಾಟದ ಪ್ರಮುಖ ಉದಾಹರಣೆಯಾಗಿದೆ….✍️

WhatsApp Image 2025-06-21 at 19.57.59
Trending Now