September 9, 2025
sathvikanudi - ch tech giant

ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಖರ್ಚು ವಿವರ ನೀಡಲು ವಿಳಂಬ: ಸದಸ್ಯರ ಆಕ್ರೋಶ..!?

Spread the love



ತುಮಕೂರು: ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಆಡಳಿತಧಿಕಾರಿಗಳ ಅವಧಿಯಲ್ಲಿ ಜಮಾ ಮತ್ತು ಖರ್ಚಾಗಿರುವ ಹಣದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕೇಳಿದರೂ, ಸಂಬಂಧಪಟ್ಟ ಅಧಿಕಾರಿಗಳು ದಾಖಲೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಪುರಸಭಾ ಸದಸ್ಯ ರೇಣುಕಾ ಪ್ರಸಾದ್ ಅವರು ಪುರಸಭಾ ನಿಧಿಯ ಅಡಿಯಲ್ಲಿ ಖರ್ಚಾಗಿರುವ ಹಣದ ವಿವರಗಳನ್ನು RTI ಮೂಲಕ ಕೇಳಿದ್ದರು. ಆದರೆ, ನಿಗದಿತ 30 ದಿನಗಳ ಅವಧಿಯೊಳಗೆ ಮಾಹಿತಿ ನೀಡುವ ಬದಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಅನುಮಾನಗಳು ಮೂಡಿವೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಮಾತನಾಡಿದ ರೇಣುಕಾ ಪ್ರಸಾದ್, “RTI ಪ್ರಕಾರ, ಅಧಿಕಾರಿಗಳು 30 ದಿನಗಳೊಳಗೆ ಮಾಹಿತಿ ನೀಡಬೇಕು. ಆದರೆ ಅವರು ದಾಖಲೆಗಳನ್ನು ಮರೆಮಾಚುವ ಮೂಲಕ ಉತ್ತರದಾಯಿತ್ವವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಆಡಳಿತದ ಮೇಲಿನ ವಿಶ್ವಾಸ ಕುಂದಿಸುವ ಕ್ರಮ,” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಅಧಿಕಾರಿಗಳ ಈ ನಡೆ ವಿರುದ್ಧ ದೂರು ಸಲ್ಲಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಮತ್ತು ಉನ್ನತ ಅಧಿಕಾರಿಗಳು ಎಂತಹ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

WhatsApp Image 2025-06-21 at 19.57.59
Trending Now