September 9, 2025
sathvikanudi - ch tech giant

ಹೋಟೆಲ್ ಗಳಿಗೆ ಫುಡ್ ಸೇಫ್ಟಿ ಆಫೀಸರ್ ಸದಾಶಿವ ಅವರು ದಿಢೀರ್ ಭೇಟಿ…

Spread the love

ಆಯನೂರು  ,

ಆಯನೂರು ಬಸ್ ತಂಗುದನದ ಇಂಭಾಗದಲ್ಲಿರುವ SLV fast food ಹೋಟೆಲ್ ಗೆ ಫುಡ್ ಸೇಫ್ಟಿ ಆಫೀಸರ್ ಆದ ಸದಾಶಿವ ಅವರು ದಿಢೀರ್ ಭೇಟಿ ನೀಡಿ, ಹೋಟೆಲ್ ನ ಪರವಾನಗಿ ಯನ್ನು ಪರಿಶೀಲಿಸಿ, ಅಲ್ಲಿನ ಸಿಬ್ಬಂದಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು. ಹೋಟೆಲ್ ನ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಟೆಸ್ಟಿಂಗ್ ಪೌಡರ್ ಬಳಸುತ್ತಿರುವ ಕುರಿತು ವಿಚಾರಣೆ ನಡೆಸಿದರು.


ಅವರು ಹೋಟೆಲ್ ಸಿಬ್ಬಂದಿಗೆ ಕಡ್ಡಾಯವಾಗಿ ಕಟಿಂಗ್ ಮತ್ತು ಟ್ರಿಮ್ಮಿಂಗ್ ಮಾಡಿಸಿಕೊಳ್ಳಲು ಸೂಚಿಸಿದರು. ಅಡುಗೆ ಮಾಡುವವರು ಆರೋಗ್ಯ ಪರೀಕ್ಷಾ ಪ್ರಮಾಣಪತ್ರ ಹೊಂದಿರಬೇಕು ಮತ್ತು ತಲೆಗೆ ಮತ್ತು ಕೈಗೆ ಗ್ಲೋವ್ಸ್ ಗಳನ್ನು ಬಳಸಬೇಕೆಂದು ತಿಳಿಸಿದರು.

ಹೋಟೆಲ್ ನಲ್ಲಿ ಶುದ್ಧತೆ ಮತ್ತು ಆರೋಗ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿರಲು ಮತ್ತು ಆರೋಗ್ಯ ಇಲಾಖೆಯ ನಿಯಮವನ್ನು ಮತ್ತು ಪರವಾನಗಿ ಯನ್ನು ಒಂದು ವಾರದ ಒಳಗೆ ಸರಿಪಡಿಸಿ ಕೊಳ್ಳಬೇಕೆಂದು ನೋಟೀಸ್ ಜಾರಿಗೊಳಿಸಾಲಾಗಿದೆ. ಈ ಕ್ರಮದಿಂದ ಗ್ರಾಹಕರಿಗೆ ಪೋಷಣಯುಕ್ತ ಮತ್ತು ಸುರಕ್ಷಿತ ಆಹಾರ ಒದಗಿಸಲು ಸಹಕಾರಿ ಎಂದು ಹೇಳಿದರು.

ಸದಾಶಿವ ಅವರ ಈ ದಿಢೀರ್ ಬೇಟಿಯಿಂದ, ಸ್ಥಳೀಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ಆಹಾರದ ಗುಣಮಟ್ಟ ಮತ್ತು ಆರೋಗ್ಯದ ಕಾಳಜಿಯ ಕುರಿತು ಹೆಚ್ಚು ಜಾಗೃತರಾಗಲು ಪ್ರೇರಿತರಾಗಿದ್ದಾರೆ. ಹೋಟೆಲ್ ನ ಸಿಬ್ಬಂದಿಗಳು ಮತ್ತು ವ್ಯವಸ್ಥಾಪಕರು ಈ ಸಲಹೆಗಳನ್ನು ಪಾಲಿಸುವ ಮೂಲಕ ಗ್ರಾಹಕರಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.✍️✍️✍️✍️

WhatsApp Image 2025-06-21 at 19.57.59
Trending Now