September 9, 2025
sathvikanudi - ch tech giant

ತುಮಕೂರಿನಲ್ಲಿ ಸಂಪ್ರದಾಯಬದ್ಧವಾಗಿ, ಹದ್ದೂರಿಯಿಂದ ಬಕ್ರೀದ್ ಹಬ್ಬ ಆಚರಣೆ…!

Spread the love



ತುಮಕೂರು: ಶಾಂತಿ, ತ್ಯಾಗ ಮತ್ತು ಧರ್ಮಭಾವನೆಯ ಸಂಕೇತವಾದ ಬಕ್ರೀದ್ ಹಬ್ಬವನ್ನು ತುಮಕೂರಿನ ಮುಸ್ಲಿಂ ಸಮುದಾಯದ ನೂರಾರು ಬಾಂದವರು ಭಕ್ತಿ ಭಾವಪೂರ್ಣವಾಗಿ ಆಚರಿಸಿದರು. ನಗರದ ಈದ್ಗಾ ಮೈದಾನದಲ್ಲಿ ನಸುಕಿನ ಜಾವದಿಂದಲೇ ಸಾವಿರಾರು ಮಂದಿ ನೆರೆದಿದ್ದು, ವಿಶಾಲ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಸಾಮೂಹಿಕ ನಮಾಜ್ ಸಲ್ಲಿಸಿದರು. ಹಬ್ಬದ ಉತ್ಸಾಹ ಹಾಗೂ ಶ್ರದ್ಧೆಯ ದೀಪ ಬೆಳಗಿದ ಈ ಸಂದರ್ಭದಲ್ಲಿ, ಎಲ್ಲೆಲ್ಲೂ ಧರ್ಮದ ಶಿಸ್ತು, ಶಾಂತಿ ಮತ್ತು ಐಕ್ಯತೆ ಪ್ರಕಟವಾಯಿತು.

ಈ ಮಹತ್ವದ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು ಅವರು ನಾಡಿಗೆ ಶಾಂತಿ, ಸಮೃದ್ಧಿ  ಕಾಪಾಡಿ ಬೆಳೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. “ಧರ್ಮವು ಜನರನ್ನು ವಿಭಜಿಸುವ ಶಕ್ತಿಯಲ್ಲ, ಒಂದಾಗಿಸುವ ಶಕ್ತಿಯಾಗಿದೆ. ಬಕ್ರೀದ್ ಹಬ್ಬವು ತ್ಯಾಗ ಮತ್ತು ಸಹನಶೀಲತೆಯ ಸಂಕೇತ. ಈ ಹಬ್ಬದ ಮೂಲಕ ನಾವು ಬಡವರಿಗಿಂತ ಹೆಚ್ಚು ನಿಕಟವಾಗಬೇಕು ಮತ್ತು ಎಲ್ಲರಿಗೂ ಸಹಾಯಮಾಡಬೇಕು,” ಎಂದು ಧರ್ಮಗುರುಗಳು ಶ್ರದ್ಧಾ ಪೂರ್ವಕವಾಗಿ ಹೃದಯಸ್ಪರ್ಶಿ ಸಂದೇಶ ನೀಡಿದರು.

ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಹಾಗೂ ಸ್ವಯಂಸೇವಕರು ಉತ್ತಮ ವ್ಯವಸ್ಥೆ ಮಾಡಿಕೊಂಡಿದ್ದು, ಯಾವುದೇ ಅಶಾಂತಿಯಿಲ್ಲದೇ ಕಾರ್ಯಕ್ರಮ ಶಿಸ್ತಿನಿಂದ ಮತ್ತು ಶಾಂತಿಯುತವಾಗಿ ನಡೆಯಿತು. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ವೈದ್ಯಕೀಯ ಶಿಬಿರ ಮತ್ತು ವಾಹನ ನಿಲುಗಡೆ ಸ್ಥಳಗಳು ಕಲ್ಪಿಸಲಾಗಿತ್ತು.

ಇಡೀ ಕಾರ್ಯಕ್ರಮವು ನಾಡಿನ ವೈವಿಧ್ಯಮಯ ಧರ್ಮೀಯ ಹಬ್ಬಗಳ ಸೌಹಾರ್ದತೆಗೆ ಮತ್ತೊಂದು ಉತ್ತಮ ಉದಾಹರಣೆಯಾಗಿ ಮೆರೆದಿತು. ಬಕ್ರೀದ್ ಹಬ್ಬದಂತಹ ಪವಿತ್ರ ಆಚರಣೆಗಳು ದೇಶದ ಏಕತೆಯ ಬಾಳಿಗೆ ನೀರೂರಿಸಿ, ಜನಮನ್ನಣೆಯ ಜೀವಾಳವನ್ನೇ ಬಲಪಡಿಸುತ್ತವೆ. ತುಮಕೂರಿನಲ್ಲಿ ನಡೆದ ಈ ಶ್ರದ್ಧಾಮಯ ಹಾಗೂ ಶಾಂತಿಯುತ ಬಕ್ರೀದ್ ಹಬ್ಬವು ರಾಷ್ಟ್ರದ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಹೊಸ ಉಜ್ವಲ ಉದಾಹರಣೆ ನೀಡಿತು.

WhatsApp Image 2025-06-21 at 19.57.59
Trending Now