
ಮಂಗಳೂರು:
ನೀಟ್ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್ 720ರಲ್ಲಿ 720 ಅಂಕಗಳೊಂದಿಗೆ ದೇಶ, ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಮೈಸೂರು ಮೂಲದ ಅರ್ಜುನ್ ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ. ಅರ್ಜುನ್ ಅವರ ಹೆತ್ತವರು ವೈದ್ಯರಾಗಿದ್ದಾರೆ. ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು.
ಎಕ್ಸ್‌ಪರ್ಟ್ ಕಾಲೇಜಿನ ಬೋಧಕ ವೃಂದ ಮತ್ತು ಪೋಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಮುಂದೆ ಸರ್ಜನ್ ಆಗುವ ಅಭಿಲಾಶೆಯಿದೆ ಎಂದು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ.
67 ಮಂದಿಗೆ ಫಸ್ಟ್‌ರ್ಯಾಂಕ್; ಕರ್ನಾಟಕದ ಮೂವರು: ನೀಟ್‌ನಲ್ಲಿ ಅರ್ಜುನ್ ಕಿಶೋರ್ ಸೇರಿದಂತೆ ರಾಜ್ಯದ ಮೂವರು ದೇಶಕ್ಕೆ ಅಗ್ರ ರ್ಯಾಂಕ್ ಪಡೆದಿದ್ದಾರೆ.
ಈ ಸಾಧನೆ ಮಾಡಿರುವ ರಾಜ್ಯದ ಇನ್ನಿಬ್ಬರು ಬೆಂಗಳೂರಿನ ವಿ. ಕಲ್ಯಾಣ್, ಶ್ರೇಯಸ್ ಜೋಸೆಫ್. ದೇಶದಲ್ಲಿ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 67 ವಿದ್ಯಾರ್ಥಿಗಳು ಮೊದಲ ರ್ಯಾಂಕ್ ಹಂಚಿಕೊಂಡಿದ್ದಾರೆ.