September 10, 2025
sathvikanudi - ch tech giant

ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು

Spread the love

ಚನ್ನಗಿರಿ: ಚನ್ನಗಿರಿ ಠಾಣೆಯಲ್ಲಿ ಪ್ರಕರಣವೊಂದರ ಕುರಿತು ವಿಚಾರಣೆಗೆ ಕರೆ ತಂದಿ️ದ್ದ ವೇಳೆ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಮೃತಪಟ್ಟಿದ್ದು, ಲಾಕಪ್‌ ಡೆತ್‌ ಆರೋಪ ಕೇಳಿಬಂದಿ️ದೆ. ಇದರಿಂದ ರೊಚ್ಚಿಗೆದ್ದ ಒಂದು ಕೋಮಿನ ಗುಂಪು ಕಲ್ಲು ತೂರಾಟ ನಡೆಸಿ ಠಾಣೆಗೆ ನುಗ್ಗಿ ಪೀಠೊಪಕರಣ.

ಧ್ವಂಸಗೊಳಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ನಡೆಸಲಾಗಿದೆ.ಟಿಪ್ಪು ನಗರದ ನಿವಾಸಿ ಆದಿ️ಲ್‌(32) ಎಂಬಾತ ಕಾರ್ಮೆಂಟರ್‌ ಕೆಲಸ ಮಾಡುತ್ತಿದ್ದ. ಅಲ್ಲದೇ ಒಸಿ ಆಡಿಸುತ್ತಿದ್ದ ಎಂಬ ಆರೋಪವೂ ಇತ್ತು. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಚನ್ನಗಿರಿ ಠಾಣೆ ಪೊಲೀಸರು ವಿಚಾರಣೆಗಾಗಿ ಕರೆ ತಂದಿ️ದ್ದರು. ಕೆಲ ಹೊತ್ತಿನ ಬಳಿಕ ಆದಿ️ಲ್‌ ಕುಸಿದು ಬಿದ್ದಿದ್ದಾನೆ . ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ. ಆದಿ️ಲ್‌ಗೆ ಫಿಟ್ಸ್‌, ಲೋ ಬಿಪಿ ಆಗಿದ್ದರಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಕುಟುಂಬಸ್ಥರು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ. ಇದು ಲಾಕಪ್‌ ಡೆತ್‌ ಎಂದು ಆರೋಪಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ಒಂದು ಕೋಮಿನ ಸಾವಿರಾರು ಜನ ತಡರಾತ್ರಿ ಠಾಣೆ ಎದುರು ಜಮಾಯಿಸಿ ಆದಿ️ಲ್‌ ಮೃತದೇಹವಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮೂರು ಪೊಲೀಸ್‌ ಜೀಪ್‌ಗ್ಳಿಗೆ ಹಾನಿ ಮಾಡಲಾಗಿದೆ. ಬಂದೋಬಸ್ತ್ಗೆ ಬಂದಿ️ದ್ದ ಮಾಯಕೊಂಡ ಠಾಣೆ ಇನ್ಸ್ ಪೆಕ್ಟರ್‌ ಜೀಪನ್ನು ತಲೆ ಕೆಳಗೆ ಮಾಡಿದ್ದಾರೆ

ಠಾಣೆ ಎದುರಿದ್ದ ಧ್ವಂಜ ಸ್ಥಂಭವ ಕಿತ್ತೆಸೆದಿ️ದ್ದಾರೆ.ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ಪರಿಸ್ಥಿತಿ ಬೂದಿ️ ಮುಚ್ಚಿದ ಕೆಂಡದಂತಿದೆ. ತಡರಾತ್ರಿಯೇ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಕರೆ ಮಾಡಿ ಮಾಹಿತಿ ಪಡೆದಿ️ದ್ದು ಬಿಗಿ ಬಂದೋಬಸ್ತ್ ಕೈಗೊಳ್ಳಲು ಸೂಚಿಸಿದ್ದಾರೆ.

WhatsApp Image 2025-06-21 at 19.57.59
Trending Now