September 9, 2025
sathvikanudi - ch tech giant

ನೀರಿನಲ್ಲಿ ಕೊಚ್ಚಿ ಹೋಗುತಿದ್ದ ವ್ಯಕ್ತಿಯ ಜೀವ ರಕ್ಷಿಸಿದ 112 ಪೊಲೀಸ ಅಧಿಕಾರಿಗಳು…

Spread the love

ಶಿವಮೊಗ್ಗ

ಭಾರಿ ಸುರಿದ ಮಳೆ ನೀರಿಗೆ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಪೊಲೀಸರು..

ಎಸ್ಪಿ ಮಿಥುನ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ.

ದಿನಾಂಕಃ 18-05-2024 ರಂದು ರಾತ್ರಿ ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನು ರಸ್ತೆಯ ಮೇಲೆ ಹರಿಯುತ್ತಿದ್ದ ಮಳೆಯ ನೀರಿನಿಂದ ಬೈಕ್ ನಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಬಗ್ಗೆ ERSS – 112 ತುರ್ತು ಸಹಾಯವಾಣಿಗೆ ಕರೆ ಬಂದಿತ್ತು.

ಕರೆಯ ಮೇರೆಗೆ, ERSS – 112 ವಾಹನದ ಅಧಿಕಾರಿಗಳಾದ  ರಂಗನಾಥ್, ಹೆಚ್. ಸಿ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು  ಪ್ರಸನ್ನ ಕುಮಾರ್, ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರು ಕೂಡಲೇ ಸ್ಥಳಕ್ಕೆ ಧಾವಿಸಿ ಕೊಚ್ಚಿ ಹೋಗುತಿದ್ದ ವ್ಯಕ್ತಿಯನ್ನು ರಕ್ಷಿಸಿ ಪ್ರಾಣಪಯದಿಂದ ಪಾರು ಮಾಡಿ ಉತ್ತಮ ಕಾರ್ಯ ನಿರ್ವಹಿಸಿದ್ದರು.


ರಕ್ಷಿಸಿರುವ ಬೆನ್ನಲ್ಲೇ  ವಿಷಯ ತಿಳಿದು ಇಂದು ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ, ಅವರು ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್ ಮತ್ತು  ಪ್ರಸನ್ನ ಕುಮಾರ್  ರವರ ಉತ್ತಮವಾದ ಕಾರ್ಯಕ್ಕೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಅಭಿನಂದಿಸಿ ಪ್ರೋತ್ಸಹ ನೀಡಿದ್ದಾರೆ ಇಲಾಖೆಯಲ್ಲಿ ಎಲ್ಲರು ಕೆಟ್ಟವರಲ್ಲ ಸಮಯ ಬಂದರೆ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಜನತೆಯ ಪ್ರಾಣ ಕಾಪಾಡುವ ಅಧಿಕಾರಿಗಳು ಇದ್ದರೆ ಎನ್ನುವದಕ್ಕೆ ಕಾರಣರಾಗಿದ್ದಾರೆ… ✍️✍️✍️✍️

WhatsApp Image 2025-06-21 at 19.57.59
Trending Now