
ತುಮಕೂರು ಜಿಲ್ಲೆ :
ತಿಪಟೂರು ತಾಲ್ಲೂಕಿನ ಹೋನ್ನಾವಳ್ಳಿ ಹೋಬಳಿಯ ಗುಡಿಗೂಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೊಂಡನಹಳ್ಳಿ ದಲಿತ ಕಾಲೋನಿಯಲ್ಲಿ ಚರಂಡಿಗಳ ಅಸ್ತವ್ಯಸ್ತತೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರತೆ ಎದುರಾಗಿದೆ. ಚರಂಡಿಗಳು ಕಸ ಮತ್ತು ಕಡ್ಡಿಯಿಂದ ತುಂಬಿ ಹರಿಯುತ್ತಿರುವ ಕಾರಣ ಸೊಳ್ಳೆಗಳ ಪ್ರಮಾಣ ಉಲ್ಬಣಗೊಂಡಿದ್ದು, ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸೋಂಕುಗಳ ಅಪಾಯ ಎದುರಾಗಿದೆ.

ಸ್ಥಳೀಯರು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಅವರು ಆರೋಪಿಸುತ್ತಿದ್ದಾರೆ. “ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಮಕ್ಕಳು, ವೃದ್ಧರು ಬಾಧೆಪಟ್ಟು ಆಸ್ಪತ್ರೆಗಳಿಗೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ,” ಎಂದು ಗ್ರಾಮದ ಹಿರಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಲೋನಿಯ ಮದ್ಯಭಾಗದಲ್ಲಿರುವ ಬಾವಿಗೆ ರಕ್ಷಣಾ ಜಾಲರಿ ಇಲ್ಲದೇ ಉಳಿದಿರುವುದು ದೊಡ್ಡ ಅಪಾಯಕ್ಕೆ ಆಹ್ವಾನ ನೀಡುವಂತಹ ಸ್ಥಿತಿಯಾಗಿದೆ. ಮಕ್ಕಳು ಆಟವಾಡುವ ಪ್ರದೇಶದಲ್ಲಿ ಈ ಬಾವಿ ಇರುವ ಕಾರಣ ಯಾವುದೇ ಕ್ಷಣದಲ್ಲಾದರೂ ದುರ್ಘಟನೆ ಸಂಭವಿಸಬಹುದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಅವರು ಈ ನಿರ್ಲಕ್ಷ್ಯಕ್ಕೆ ನೇರ ಹೊಣೆಗಾರರಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನೇ ಗುರುತಿಸಿದ್ದಾರೆ.
ದಲಿತ ಕಾಲೋನಿಯ ಪರಿಸ್ಥಿತಿ ಅತ್ಯಂತ ಹೀನಾಯವಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ನಾಗರಿಕ ಜೀವನದ ಹಕ್ಕುಗಳು ಹರಣಗೊಳ್ಳುತ್ತಿವೆ. ಸುರಕ್ಷಿತ ರಸ್ತೆ, ಪೌರ ಸೇವೆಗಳು, ಸಿಂಚನ ವ್ಯವಸ್ಥೆ ಎಲ್ಲವೂ ದುರ್ಬಳಕೆಯಲ್ಲಿವೆ. ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಅನಾರೋಗ್ಯದ ಹೊರೆ ಜತೆಯಾಗಿದೆ. ಈ ರೀತಿಯಾಗಿ ನಮ್ಮ ದಲಿತ ಕಾಲೋನಿಯನ್ನು ಕಡೆಗಾನಿಸಲು ಕಾರಣವೇನು ಎಂದು ತಿಳಿಯದು….?
ಈ ಹಿನ್ನಲೆಯಲ್ಲಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ CEO ಅವರು ತಕ್ಷಣವೇ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ, ಮತ್ತು ತಿಪಟೂರು ತಾಲ್ಲೂಕು E.O ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೆ ಈ ನತದೃಷ್ಟ ದಲಿತ ಕಾಲೋನಿವಾಸಿಗಳಿಗೆ ಮಾನವೀಯತೆ ನೆಲೆಸುವಂತಹ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಡವಿದೆ.
“ದೈನಂದಿನ ಜೀವನವೇ ಬಯದಭೀತಿಯಾಗಿದೆ. ಸರ್ಕಾರದ ನಡವಳಿಕೆಯು ಪ್ರಜಾಪ್ರಭುತ್ವಕ್ಕೆ ನಿಲ್ಲುವ ಪ್ರಶ್ನೆಯಾಗಿದೆ” ಎಂಬುದು ಜನತೆಯ ತೀವ್ರ ಬೇಸರ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊ0ಡು ಕಾಲೋನಿಯ ನಿವಾಸಿಗಳಿಗೆ ಮೂಲಭೂತ ವ್ಯವಸ್ಥೆ ಮಾಡಿಕೊಡು ರೊ ಎಂಬುದನ್ನು ಕಾದು ನೋಡಬೇಕಾಗಿದೆ.✍🏻✍🏻✍🏻
✍🏻 ವರದಿ: ಮಂಜು ಗುರುಗದಹಳ್ಳಿ.
ಸಾತ್ವಿಕನೂಡಿ ಲೈವ್ ಕ್ಷಣ ಕ್ಷಣ ಸುದ್ಧಿಗಾಗಿ join butten ಮೇಲೆ click madi