September 10, 2025
sathvikanudi - ch tech giant

ಹಿಂದೂ ಫೈರ್ ಬ್ರಾಂಡ್ ಯತ್ನಾಳ ನಡೆ ನಿಗೂಢ: ಮುಂದಿನ ರಾಜಕೀಯ ತಿರುವು ಏನು?

Spread the love



ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರ ಮುಂದಿನ ರಾಜಕೀಯ ಹಾದಿ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಪಕ್ಷವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಯತ್ನಾಳರನ್ನು ಬಿಜೆಪಿ ಉಚ್ಛಾಟನೆ ಮಾಡಿದ್ದರೂ, ಅವರು ಮುಂದೇನು ಮಾಡಲಿದ್ದಾರೆ ಎಂಬುದರ ಬಗ್ಗೆ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ತಲೆಕೆಡಿಸುವ ಚರ್ಚೆ ನಡೆಯುತ್ತಿದೆ.

ಇತ್ತೀಚೆಗೆ ಯತ್ನಾಳ ಅವರ ಬೆಂಬಲಿಗ ಶಾಸಕರು ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆಸಿದ್ದು, ಅವರ ಮುಂದಿನ ರಾಜಕೀಯ ಹೆಜ್ಜೆಯ ಕುರಿತು ಮಹತ್ವದ ಚರ್ಚೆ ನಡೆದಿದೆ. ಬಿಜೆಪಿಯಿಂದ ಹೊರಬಂದ ಬಳಿಕ ಯತ್ನಾಳ ಅವರು ಹೊಸ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆಯಿದೆಯಾ? ಅಥವಾ ಕಾಂಗ್ರೆಸ್ ಸೇರಲಿದ್ದಾರೆ? ಅಥವಾ ಮತ್ತೆ ಬಿಜೆಪಿ ಕಡೆಗೆ ಮುಖ ಮಾಡುವರಾ? ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಯತ್ನಾಳ ಅವರು ಹಿಂದಿನಿಂದಲೂ ಹಿಂದುತ್ವ ಮತ್ತು ಸಮರ್ಥ ಭಾಜಪಾ ನಾಯಕತ್ವಕ್ಕೆ ಬೆಂಬಲ ಸೂಚಿಸಿರುವುದರಿಂದ ಅವರು ಬಿಜೆಪಿ ಸೇರುವ ಸಾಧ್ಯತೆವನ್ನೂ ನಿರಾಕರಿಸಲಾಗದು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಅವರು ಬಿಜೆಪಿ ವಿರುದ್ಧ ತೀಕ್ಷ್ಣ ಟೀಕೆ ಮಾಡಿದ್ದು, ಅವರ ಹಿಂದಿನ ಪಕ್ಷದೊಳಗೆ ಮತ್ತೆ ಸೇರಲು ಸುಲಭವಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು, ಕಾಂಗ್ರೆಸ್ ಕೂಡಾ ಯತ್ನಾಳನಂತಹ ಪ್ರಬಲ ನಾಯಕನನ್ನು ತನ್ನ ಕಡೆಗೆ ಸೆಳೆಯಲು  ಸಾಧ್ಯತೆ ಇದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಪ್ರಾದೇಶಿಕ ರಾಜಕೀಯ ಚಟುವಟಿಕೆಗಳು ಜೋರಾಗಿರುವ ಹಿನ್ನೆಲೆ, ಯತ್ನಾಳ ಹೊಸ ಪಕ್ಷ ಆರಂಭಿಸಿ, ಆಪ್ತ ನಾಯಕರನ್ನು ಕೂಡಿಸಿಕೊಂಡು ಪ್ರಾದೇಶಿಕ ರಾಜಕಾರಣ ಮಾಡಲು ಪ್ರಯತ್ನಿಸಬಹುದೆಂಬ ಸಾಧ್ಯತೆ ಕೂಡಾ ತೀರ್ಮಾನಿಸಲು ಸಾಧ್ಯವಿಲ್ಲ.

ಈ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲು ಕೆಲ ದಿನಗಳ ಕಾಲ ಕಾಯಬೇಕಾಗುವುದು. ಯತ್ನಾಳ ಅವರ ಮುಂದಿನ ರಾಜಕೀಯ ತೀರ್ಮಾನ ರಾಜ್ಯ ರಾಜಕೀಯದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕಿದೆ.

WhatsApp Image 2025-06-21 at 19.57.59
Trending Now