September 9, 2025
sathvikanudi - ch tech giant

ಉಪ್ಪಾರ್ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಹಾಗೂ ಪ್ರತಿಭಾ ಪುರಸ್ಕಾರ!?

Spread the love




ಬೇಲೂರು ವಿಧಾನಸಭಾ ಕ್ಷೇತ್ರದ ಉಪ್ಪಾರ್ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವು ಭಾವಪೂರ್ಣವಾಗಿ ನೆರವೇರಿತು.

ಈ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಭಾರ್ಗವ ನಂದಗಿರಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮತ್ತು ಆತ್ಮೀಯ ಜಿಕೆ ಗಿರೀಶ್ ಉಪ್ಪಾರ್ ರವರ (ಮಾಜಿ ಉಪ್ಪಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರು) ಮಾರ್ಗದರ್ಶನದಲ್ಲಿ ನಡೆಯಿತು. ಸೂರ್ಯ ಜಿ ಕಾಳೇನಹಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯೊಂದಿಗೇ ಭಗೀರಥ ಮಹರ್ಷಿಯ ಜಯಂತಿ ಸ್ಮರಣಾರ್ಥವಾಗಿ “ರಾಜಶ್ರೀ ಭಗೀರಥ ಪುರಸ್ಕಾರ” ನೀಡಲಾಯಿತು. ಈ ಮೂಲಕ ಮಕ್ಕಳ ಸಾಧನೆಯನ್ನು ಉತ್ತೇಜಿಸಿ, ಸಮಾಜದ ಮೆರೆದವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೇಲೂರಿನ ಪ್ರಮುಖ ಮುಖಂಡರಾದ ಸುರೇಶ್, ಸತೀಶ್, ಮೋಹನ್, ರಂಗಸ್ವಾಮಿ, ಹಾಸನ ಜಿಲ್ಲೆಯ ಉಪ್ಪಾರ್ ಸಮಾಜದ ಅಧ್ಯಕ್ಷರಾದ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಗ್ರಾಮ ಪಂಚಾಯಿತಿ ಸದಸ್ಯರು ವಸಂತ, ಜಿಲ್ಲಾ ಖಜಾಂಚಿ ಶಶಿ, ಸದಸ್ಯರು ಹುಲಿಯಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಹಾಗೂ ಬೆಟ್ಟದಪುರದ ಮುಖಂಡರಾದ ಮಂಜು, ಲೋಕೇಶ್ (ಹಾಸನ), ಮಂಜು (ಕೊಣನೂರು), ಮಧು, ನಾಗೇಶ್, ಸಂತೋಷ್, ಶಿವು ಮತ್ತು ಗ್ರಾಮದ ಮುಕ್ತಮನಸ್ಸಿನ ಸ್ನೇಹಿತರು, ಸಮಾಜದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಮಕ್ಕಳಿಗೆ ಹಾರೈಕೆ ಸಲ್ಲಿಸಿದರು.

ಈ ಕಾರ್ಯಕ್ರಮದಿಂದ ಉಪ್ಪಾರ್ ಸಮಾಜದಲ್ಲಿ ಶಿಕ್ಷಣದ ಮಹತ್ವ ಇನ್ನಷ್ಟು ಬಲವರ್ಧನೆಯಾಗಿದ್ದು, ಮುಂದಿನ ತಲೆಮಾರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು



ವರದಿ✍🏻 : ಉಮೇಶ್ ಅರಸೀಕೆರೆ

WhatsApp Image 2025-06-21 at 19.57.59
Trending Now