
ಆಲೂರು : ಭಾರತ ಸರ್ಕಾರ ,ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ ಹಾಸನ ,ಹೇಮಾವತಿ ಮಹಿಳಾ ಸಮಾಜ, ಅಂಬೇಡ್ಕರ್ ಯುವಕ ಸಂಘ, ಬಸವೇಶ್ವರ ಪ್ರೌಢಶಾಲೆ ಆಲೂರು ಸಹಯೋಗದಲ್ಲಿ
ಡಾಕ್ಟರ್ ಶಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ಹಮ್ಮಿಕೊಳ್ಳಲಾಯಿತು
ಈ ಕಾರ್ಯಕ್ರಮದಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಫೋಟೋ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಜೆ ಎಸ್ ಎಸ್ ಡಿ ಇಡಿ ಕಾಲೇಜಿನ ಗಣಿತ ಉಪನ್ಯಾಸಕರಾದ ಕೆ ಎನ್ ಜಗದೀಶ್ ಸರ್ ಮಾತನಾಡಿ 1901 ರಂದು ಶಾಮ್ ಪ್ರಸಾದ್ ಮುಖರ್ಜಿ ಅವರು ಜನಿಸಿದರು ಒಬ್ಬ ಭಾರತೀಯ ನ್ಯಾಯವಾದಿ, ಶಿಕ್ಷಣ ತಜ್ಞ, ರಾಜಕಾರಣಿ, ಕಾರ್ಯಕರ್ತ, ಸಾಮಾಜಿಕ ಕಾರ್ಯಕ್ರಮ , ರಾಜ್ಯ ಮತ್ತು ರಾಷ್ಟ್ರ ಸರ್ಕಾರಗಳಲ್ಲಿ ಸಚಿವರಾಗಿದ್ದರು. ಭಾರತದ ಸ್ವತಂತ್ರ ಚಳುವಳಿ ಒಳಗೆ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸುವುದಕ್ಕಾಗಿ ಹೆಸರುವಾಸಿಯಾಗಿದ್ದು ಅವರು ನಂತರ ಪ್ರಧಾನಿ ಜವಾಲಾಲ್ ನೆಹರು ಅವರ ಸಂಪುಟದಲ್ಲಿ ಭಾರತದ ಮೊದಲ ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿ ಕಾರ್ಯ ಸೇವೆ ಸಲ್ಲಿಸಿದರು, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದರು ಉತ್ತಮವಾದ ಕೆಲಸವನ್ನು ನಿರ್ವಹಿಸಿದರು ಯುವಶಕ್ತಿಗೆ ಮಹತ್ವವನ್ನು ಸಾರಿದಂತಹ ವ್ಯಕ್ತಿಯಾಗಿದ್ದರು
ಈ ಕಾರ್ಯಕ್ರಮದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾಗಿರುವಂತಹ ದೀಪು ಸರ್ ,ಹರೀಶ ಕೆ ಟಿ, ಕೀರ್ತಿ ಏ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ವರದಿ : ಯೊಗೇಶ್ ಹಾಸನ ಜಿಲ್ಲೆ