
ತುರುವೇಕೆರೆ, ತಾಲೂಕು ದಂಡಿನ ಶಿವರ ಹೋಬಳಿ, ಬ್ಯಾಡರಹಳ್ಳ ಕಾವಲ್ ಗ್ರಾಮ ವ್ಯಾಪ್ತಿಗೆ ಬರುವ ಸರ್ವೆ ನಂಬರ್ 3/15 ನ್ನು ರೆವಿನ್ಯೂ ಸ್ಕೆಚ್ನಂತೆ, ನಾಲ್ಕು ಎಕರೆ ಜಮೀನು 1973 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಹನುಮಯ್ಯ ಬಿನ್ ನರಸಯ್ಯ ಎಂಬುವರಿಗೆ ಮಂಜೂರಾಗಿದ್ದು, ಅದರಂತೆ ಫಲಾನುಭವಿಗಳು ಉಳುಮೆ ಮಾಡಲು ಹೋದರೆ, ಪ್ರತಿ ಬಾರಿಯೂ ಸವರ್ಣಿಯ ರಾಜಶೇಖರ್ ಬಿನ್ ಪುಟ್ಟಯ್ಯ ಎಂಬ ವ್ಯಕ್ತಿ ಈ ಜಮೀನನ್ನು ನಾನು ಕೊಂಡುಕೊಂಡಿದ್ದೇನೆ ಇದು ನನ್ನದು ಎಂದು ಹೇಳಿ ದಲಿತರಿಗೆ ಯಾಕೆ ಜಮೀನು ಎನ್ನುವ ಮನೋಭಾವದಿಂದ ಉಳುಮೆ ಮಾಡುವ ಸಮಯಕ್ಕೆ ಸರಿಯಾಗಿ ಹೈಡ್ರಾಮ ಮಾಡುತ್ತಾ ಟ್ರ್ಯಾಕ್ಟರ್ ಮುಂಭಾಗ ಬಂದು ಮಲಗುವುದು, ಅಡ್ಡ ನಿಲ್ಲುವುದು ಇದೇ ರೀತಿ ಉಳುಮೆ ಮಾಡಲು ಬಹಳ ತೊಂದರೆ ನೀಡುತ್ತಿದ್ದಾರೆ, ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದೂರು ಸಹ ಸಲ್ಲಿಸಿದ್ದು ತಾಲೂಕು ದಂಡಾಧಿಕಾರಿಯವರಿಗೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಕೂಡ ಮಾಡಲಾಗಿದೆ ಆದರೂ ಈತ 3/14 ಸರ್ವೆ ನಂಬರ್ನಲ್ಲಿರುವ ಆತನ ಜಮೀನನ್ನು ಬಿಟ್ಟು ಸರ್ವೆ ನಂಬರ್ 3/15 ರ ಜಮೀನಿಗೆ ಬಂದು ದಲಿತರಿಗೆ ಈ ಭೂಮಿ ದೊರಕಬಾರದೆಂದು ಮಹಿಳೆಯೊಬ್ಬರು ಸೇರಿದಂತೆ ತನ್ನ ಕುಟುಂಬದ ಸದಸ್ಯರೊಂದಿಗೆ ಸೇರಿ ಜಮೀನಿಗೆ ಬಂದು ತೊಂದರೆ ನೀಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿರುವ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನಶಿವರ ಕುಮಾರ್ ರವರು ಜಮೀನಿನ ಬಳಿಯೇ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಎಲ್ಲಾ ದಾಖಲೆಗಳು ಹನುಮಯ್ಯ ಬಿನ್ ನರಸಯ್ಯ, ಎಂಬುವರಿಗೆ ಸೇರಿದ್ದು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ದೂರನ್ನು ಸಹ ನೀಡಲಾಗಿದೆ, ಕೂಡಲೇ ಅಧಿಕಾರಿಗಳು ದಲಿತರ ವಿರುದ್ಧ ದೌರ್ಜನ್ಯ ಮಾಡಲು ಮುಂದಾಗಿರುವ ಈತನ ಮೇಲೆ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ, 47-74/75(ರಿ) ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಜಮೀನಿನ ಮಾಲೀಕರು ಹಾಗೂ ಅವರ ಕುಟುಂಬಸ್ಥರು ಸ್ಥಳಿಕರು ಉಪಸ್ಥಿತರಿದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.
ಕ್ಷಣ ಕ್ಷಣ ಸುದ್ಧಿಗಾಗಿ ಸಾತ್ವಿಕನುಡಿ ಲೈವ್ join butten press ಮಾಡಿ