
ತಿಪಟೂರು: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ರಾಜಶೆಟ್ಟಿಹಳ್ಳಿಯಲ್ಲಿ ಉಮೇಶ್ ಎಂಬುವವರು ತಮ್ಮ ಪಿತ್ರಾರ್ಜಿತ ಸೈಟ್‌ಗಾಗಿ ಇ-ಸ್ವತ್ತು ಮಾಡಿಸಿಕೊಳ್ಳಲು 11000 ರೂ. ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಪರಶುರಾಮ ರಾಮಪುರವನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಬುಧವಾರ ಮಧ್ಯಾಹ್ನ 2:30ರ ಸಮಯದಲ್ಲಿ ಉಳಿಕೆ 5500 ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಎಸ್ಪಿ ಲಕ್ಷ್ಮಿಗಣೇಶ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ. ಉಮಾಶಂಕರ್ ನೇತೃತ್ವದ ತಂಡ ದಾಳಿ ನಡೆಸಿತು. ದಾಳಿಯ ವೇಳೆ ಲಂಚದ ಹಣದ ಸಮೇತ ಪಿಡಿಓ ಪರಶುರಾಮ ಅವರನ್ನು ವಶಕ್ಕೆ ಪಡೆಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರಾಮಕೃಷ್ಣ, ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿ, ಹಾಗೂ ಸಿಬ್ಬಂದಿಗಳಾದ ನಾಗರಾಜು, ರಾಘವೇಂದ್ರ, ಯತೀಗೌಡ, ರವಿ, ಭಾಸ್ಕರ, ನರಸಿಂಹರಾಜು, ಪ್ರಕಾಶ್, ಮಹಲಿಂಗಪ್ಪ ಮತ್ತು ಕರಿಯಪ್ಪ ಉಪಸ್ಥಿತರಿದ್ದರು.
ಈ ಘಟನೆ ತಿಪಟೂರಿನ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ ಮತ್ತು ಜನರಲ್ಲಿ ದುರ್ಬಲತನವನ್ನು ತೋರಿಸುತ್ತದೆ. ಲೋಕಯುಕ್ತರ ಉತ್ತಮ ಕಾರ್ಯಚಾರಣೆ ಯಿಂದ ತನಿಖೆಯ ಕಾರಣದಿಂದ ಗ್ರಾಮಸ್ಥರಲ್ಲಿ ಭ್ರಷ್ಟಾ ಅಧಿಕಾರಿಗಳ ವಿರುದ್ಧ ಹೋರಾಡಲು ಪ್ರೇರಣೆ ದೊರೆತಿದೆ.