
ಹಾಸನ:
ಅಪ್ಪನೇ ಮಗನನ್ನು ಕೊಲೆ ಮಾಡಿ ಬಚ್ಚಲು ಗುಂಡಿಗೆ ಮುಚ್ಚಿ ಹಾಕಿದ ಘಟನೆ ಬೆಳಕಿಗೆ ಬಂದಿದ್ದು ಹಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ
ಕಳೆದ ಎರಡು ವರ್ಷಗಳ ಹಿಂದೆ ಅಪ್ಪ ಮಗನ ನಡುವೆ ಜಗಳ ಆಗಿ ಅಪ್ಪ ಮಗನನ್ನು ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಸಾವಿಗೆ ರೋಚಕ ತಿರುವು ಪಡೆದುಕೊಂಡಿದೆ
ಬಿ ಜಿ ರಘು ಅಲಿಯಾಸ್ ಹೇಮರಾಜ್ 33 ವರ್ಷ ಕೊಲೆಯಾದ ಮಗ
ಗಂಗಧರ್ (ಅಪ್ಪ )ಮಗನನ್ನು ಕೊಲೆಮಾಡಿದ ವ್ಯಕ್ತಿ
ಸೋದರ ಮಾವ ಕೊಟ್ಟು ದೂರಿನ ಮೇರೆಗೆ ಪೊಲೀಸರು ಕಾರ್ಯಚರಣೆ
ತಂದೆ ಸಾವಿಗೆ ಮಗ ಬರಲಿಲ್ಲವೆಂದು ಅನುಮಾನಗೊಂಡ ಸೋದರ ಮಾವ ಗಂಗಧರ್ ಎರಡನೇ ಮಗ ರೂಪೇಶ್ ನನ್ನು ವಿಚಾರಿಸಿದಾಗ ಸತ್ಯ ಬಾಯ್ಯಿಬಿಟ್ಟಿದ್ದಾನೆ ಸತ್ಯತಿಳಿದ ಸೋದರ ಮಾವ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನ ಮೇರೆಗೆ ಹಾಸನ Dysp ಪ್ರಮೋದ್ ಕುಮಾರ್ ಮಾರ್ಗದರ್ಶನದಲ್ಲಿ ಸಕಲೇಶಪುರ ಎ ಸಿ ಶೃತಿ ಹಾಗೂ ಆಲೂರು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಇಂದು ಹುತು ಹಾಕಿದ್ದ ಶವವನ್ನು ಜೆ ಸಿ ಬಿ ಮುಖಾಂತರ ಕಾರ್ಯಚರಣೆ ನಡೆಸಿ ಹೊರ ತೆಗೆಯಲಾಹಿತು
ಎರಡು ವರ್ಷ ಕಳೆದರು ಕೊಲೆಯಾಗಿರುವ ವಿಷಯ ಸಂಬಂದಿಕರಾಗಲಿ ಹಾಗೂ ಗ್ರಾಮಸ್ಥರಿಗಾಗಲಿ ತಿಳಿದಿಲ್ಲ
ಸಾವಿನ ವಿಷಯ ತಿಳಿದ ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಆತಂಕ ಉಂಟು ಮಾಡಿದ್ದು ನೋಡಲು ಸುತ್ತ ಮುತ್ತಲ ಗ್ರಾಮಸ್ಥರು ಜಮಾಹಿಸಿದ್ದರು..