
ಹಾಸನ:
ರಾಜ್ಯ ಸರ್ಕಾರದ ಕನಸಿನ ಯೋಜನೆಯಡಿ ಹಾಸನದಲ್ಲಿ ಆರಂಭಗೊಂಡ ಹೈಟೆಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಈಗ ‘ಹೆಸರಿಗೆ ಮಾತ್ರ ಹೈಟೆಕ್’ ಎಂಬ ಟ್ಯಾಗ್ ಒಪ್ಪಿಸುತ್ತಿದೆ. ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರೂ, ಇಲ್ಲಿ ಎದುರಾಗುತ್ತಿರುವ ವೈದ್ಯಕೀಯ ನಿರ್ಲಕ್ಷ್ಯ ಜನರಲ್ಲಿ ತೀವ್ರ ಅಸಮಾಧಾನ ಹುಟ್ಟಿಸುತ್ತಿದೆ.

ದಾಖಲಾತಿಯ ನೆಪದಲ್ಲಿ ಅಲೆದಾಟ:
ಅನಾರೋಗ್ಯದಿಂದ ನರಳುತ್ತಿದ್ದು ಚಿಕಿತ್ಸೆಗೆ ಬಂದ ರೋಗಿಗಳನ್ನು ವೈದ್ಯರು ದಾಖಲಾತಿಯ ನೆಪದಲ್ಲಿ ಕೋಣೆಯಿಂದ ಕೋಣೆಗೆ ಅಲೆದಾಡಿಸುತ್ತಿದ್ದಾರೆ. ಸೂಚನೆ, ಸಹಾಯ ಇಲ್ಲದ ವ್ಯವಸ್ಥೆಯಲ್ಲಿ ರೋಗಿಗಳು ಹೈರಾಗಿ ಹೋಗುತ್ತಿದ್ದಾರೆ. ಕೆಲವರು ಆಸ್ಪತ್ರೆ ಸಿಬ್ಬಂದಿಗೆ ಶಾಪ ಹಾಕುವ ಪರಿಸ್ಥಿತಿಯವರೆಗೂ ತಲುಪುತ್ತಿದ್ದಾರೆ.
ವೈದ್ಯರ ಕಾಲಪಾಲನೆ ಇಲ್ಲಾ:
ಆಸ್ಪತ್ರೆಯ ಕೆಲ ವೈದ್ಯರು ಸಂಜೆಯ 4:30 ಘಂಟೆಗೂ ಮುಂಚೆಯೇ ತಮ್ಮ ಕೋಣೆಗಳಿಗೆ ಬೀಗ ಹಾಕಿಕೊಂಡು ಮನೆಗೆ ತೆರಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ತುರ್ತು ಚಿಕಿತ್ಸೆಗೆ ಬಂದವರೂ ಸಹ ನಿರಾಶೆಪಟ್ಟು ಹೋಗುವಂತಹ ದುಸ್ಥಿತಿಯಾಗಿದೆ
ಖಾಸಗಿ ಆಸ್ಪತ್ರೆಗಳಿಂದ ಬಂದವರಿಗೆ ನಿರ್ಲಕ್ಷ್ಯ:
ರೋಗಿಗಳು ಬೇರೆ ಖಾಸಗಿ ಆಸ್ಪತ್ರೆಗಳಿಂದ ಈ ಆಸ್ಪತ್ರೆಗೆ ದಾಖಲಾತಿ ಅಥವಾ ಮುಂದಿನ ಚಿಕಿತ್ಸೆಗಾಗಿ ಬಂದರೆ ವೈದ್ಯರು ಅವರನ್ನು ಗೌರವದಿಂದ ನೋಡುವ ಬದಲು ನಿರ್ಲಕ್ಷ್ಯದಿಂದ ತಿರಸ್ಕರಿಸುತ್ತಿದ್ದಾರೆ. ಇದು ಸಾರ್ವಜನಿಕ ಆಸ್ಪತ್ರೆಗಳ ನೈತಿಕತೆ ಮತ್ತು ಸಮಾನತೆ ಎಂಬ ಮೌಲ್ಯಗಳಿಗೆ ಧಕ್ಕೆ ನೀಡುತ್ತಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಮೂಲಕ ಚಿಕಿತ್ಸೆ?
ಇನ್ನೊಂದು ಗಂಭೀರ ಸಂಗತಿಯೆಂದರೆ, ರೂಮ್ ನಂ. 108 ರಲ್ಲಿ ವೈದ್ಯಕೀಯ ತರಬೇತಿ ವಿದ್ಯಾರ್ಥಿಗಳನ್ನು ಮಾತ್ರ ನಿಯೋಜಿಸಿ, ಅವರ ಮೂಲಕ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿರ್ಲಕ್ಷ್ಯದಿಂದ ಅನೆಕ ರೋಗಿಗಳ ಜೀವದೊಂದಿಗೆ ಆಟವಾಡುತ್ತಿರುವಂತಾಗಿದೆ ಎಂದು ಸಾರ್ವಜನಿಕರ ಆಕ್ರೋಶ.
“ಇದು ಹೈಟೆಕ್ ಆಸ್ಪತ್ರೆ ಅಲ್ವೆ, ಇದು ಸರಕಾರಿ ಯಂತ್ರದ ನೈಜ ಮುಖವಾಡ” ಎಂಬ ಮಾತುಗಳು ಜನರ ನಾಡಿ ಎತ್ತುತ್ತಿದೆ. ಸಮರ್ಪಕ ವೈದ್ಯರ ನೇಮಕ, ಸಮಯ ಪಾಲನೆ, ಹಾಗೂ ಶಿಸ್ತಿನ ಕಾರ್ಯಪದ್ಧತಿ ಇಲ್ಲದೆ ಈ ಆಸ್ಪತ್ರೆಯ ಹೈಟೆಕ್ ಎಂಬ ಹೆಸರುಗೂ ನೈಜ ಬಣ್ಣವಿಲ್ಲ.
ಸಾರ್ವಜನಿಕರ ಈ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತ ತಕ್ಷಣ ಕ್ರಮ ಕೈಗೊಂಡು ಈ ಆಸ್ಪತ್ರೆಯ ಸ್ಥಿತಿಗತಿಗಳನ್ನು ಸುಧಾರಿಸಬೇಕಾಗಿದೆ.
ಈ ಜಿಲ್ಲಾ ಹೈಟೆಕ್ ಆಸ್ಪತ್ರೆಯ ವೈದ್ಯಧಿಕಾರಿಗಳ ಸೇವೇಗಳ ಬಗ್ಗೆ ಇನ್ನಷ್ಟು ಮುಖ್ಯ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ನೀಡಲಾಗುವುದು ✍🏻✍🏻✍🏻
