September 10, 2025
sathvikanudi - ch tech giant

ಒಂದೇ ದಿನದಲ್ಲಿ ಮಾರ್ಗಮಧ್ಯೆಯೇ ಕೆಟ್ಟು ನಿಂತ 6 ಬಸ್: BMTC ಸೇವೆ ಗುಣಮಟ್ಟದ ಬಗ್ಗೆ ಕಳವಳ!

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರ ದಟ್ಟಣೆಯಿಂದಲೇ ಕುಖ್ಯಾತಿ ಪಡೆದಿದೆ. ಇದರ ಜೊತೆಗೆ ಸೋಮವಾರ ಸುಮಾರು ಆರು ಬಸ್ ಗಳು ವಿವಿಧ ಸ್ಥಳಗಳಲ್ಲಿ ಕೆಟ್ಟು ನಿಂತು, ಟ್ರಾಫಿಕ್ ನಿಂದ ಹೈರಾಣಾಗಿದ್ದ ಪ್ರಯಾಣಕರಿಗೆ ಮತ್ತಷ್ಟು ಕಿರಿಕಿರಿ ನೀಡಿವೆ.ಸಾಮಾಜಿಕ ಮಾಧ್ಯಮದಲ್ಲಿ ಟ್ರಾಫಿಕ್ ಬಗ್ಗೆ ಅಪ್ ಡೇಟ್ ನೀಡುವ ಸಂಚಾರ ವಿಭಾಗದ ಪೊಲೀಸರು, ಟೌನ್ ಹಾಲ್ ಜಂಕ್ಷನ್‌ನಲ್ಲಿ ಬಳಿಯ ಎನ್‌ಆರ್ ಸ್ಕ್ವೇರ್ ಜಂಕ್ಷನ್‌ ನಲ್ಲಿ ಬಿಎಂಟಿಸಿ ಬಸ್ ಬ್ರೇಕ್‌ಡೌನ್‌ ಆಗಿದ್ದು ಸ್ಲೋ ಮೂವಿಂಗ್ ಟ್ರಾಫಿಕ್ ಇದೆ ಎಂದು ಎಚ್ಚರಿಕೆ ನೀಡಿದ್ದರು.ಬಾಷ್ಯಂ ವೃತ್ತದ ಬಳಿ ಇಎಸ್‌ಐ ಆಸ್ಪತ್ರೆ ಕಡೆಗೆ ಸಾಗುತ್ತಿದ್ದ ಬಿಎಂಟಿಸಿ ಬಸ್, ಮೈಸೂರು ಬ್ಯಾಂಕ್ ವೃತ್ತದ ಪೊಲೀಸ್ ಕಾರ್ನರ್ ಬಳಿ ಮತ್ತೊಂದು ಬಸ್ ಕೆಟ್ಟು ನಿಂತಿದ್ದು, ಸಿದ್ದಾಪುರ ಜಂಕ್ಷನ್‌ನಲ್ಲಿ ನಿಮ್ಹಾನ್ಸ್ ಕಡೆಗೆ ತೆರಳುತ್ತಿದ್ದ ಒಂದು ಬಸ್ ಕೆಟ್ಟು ನಿಂತಿತ್ತು. ಸೋಮವಾರ ನಗರದ ಕೂಡ್ಲು ಗೇಟ್ ಬಳಿ ಎಲೆಕ್ಟ್ರಿಕ್ ಬಸ್ ಕೂಡ ಕೆಟ್ಟು ನಿಂತಿತ್ತು. ನಾಗವಾರ ಮೇಲ್ಸೇತುವೆಯಲ್ಲಿ ವೀರಣ್ಣಪಾಳ್ಯ ಜಂಕ್ಷನ್ ಕಡೆಗೆ ತೆರಳುತ್ತಿದ್ದ ಮತ್ತೊಂದು ಬಸ್ಸು ಕೆಟ್ಟು ನಿಂತಿತ್ತು.

ಬಿಎಂಟಿಸಿ ಬಸ್‌ಗಳು ನಿತ್ಯ ಕೆಟ್ಟು ನಿಲ್ಲುತ್ತಿದ್ದು, ಇತ್ತೀಚೆಗೆ ಕೆಟ್ಟು ನಿಲ್ಲುವ ಬಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಬಸ್‌ಗಳು ಕೆಟ್ಟು ನಿಂತಿರುವುದರಿಂದ ಸ್ಥಳಕ್ಕೆ ಧಾವಿಸಿ ಸಂಚಾರ ತೆರವು ಮಾಡಬೇಕಾಗಿರುವುದರಿಂದ ತಮ್ಮ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಿದೆ ಎಂದು ಹೇಳಿದರು. ಆದರೆ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.ಬಿಎಂಟಿಸಿ ಬಸ್‌ಗಳು ಕೆಟ್ಟು ಹೋಗುತ್ತಿರುವ ಬಗ್ಗೆ TNIE ಕಳವಳ ವ್ಯಕ್ತಪಡಿಸಿದಾಗ ಬಸ್ ಕೆಟ್ಟು ನಿಲ್ಲುವುದಕ್ಕೆ ನಿಖರವಾದ ಕಾರಣವನ್ನು ಕಂಡು ಹಿಡಿಯಬೇಕು ಎಂದು ಹಿರಿಯ BMTC ಅಧಿಕಾರಿ ಹೇಳಿದರು. ಸಮಸ್ಯೆಯನ್ನು ಪರಿಶೀಲಿಸಿ ಆದಷ್ಟು ಬೇಗ ಪರಿಹರಿಸುವುದಾಗಿ ಅಧಿಕಾರಿ ಭರವಸೆ ನೀಡಿದರು.ರಸ್ತೆಯ ಮಧ್ಯದಲ್ಲಿಯೇ ಕೆಟ್ಟುಹೋಗುವ ಬಸ್ಸುಗಳು BMTC ಒದಗಿಸುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತವೆ. ಇದರಿಂದ ಬಸ್‌ಗಳಿಗೆ ನಿಯಮಿತ ನಿರ್ವಹಣೆ ಇಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ಆಟೊ ಚಾಲಕ ಪ್ರಶಾಂತ್ ಹೇಳಿದರು. ಈ ಬಿಎಂಟಿಸಿ ಬಸ್‌ಗಳು ಹೆಚ್ಚಿನ ಪ್ರಮಾಣದ ಹೊಗೆಯನ್ನು ಹೊರಸೂಸುತ್ತವೆ, ವಾಹನದ ಫಿಟ್‌ನೆಸ್ ಬಗ್ಗೆ ಅನುಮಾನವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದರು. ಕೆಟ್ಟು ನಿಂತ ಬಸ್‌ಗಳಲ್ಲಿ ಒಂದು ಬಸ್ ಗೆ, ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

WhatsApp Image 2025-06-21 at 19.57.59
Trending Now