September 9, 2025
sathvikanudi - ch tech giant

ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಪೋಸ್ಟ್ ಮಾಡುವವರ ಮೇಲೆ ಕಠಿಣ ಕ್ರಮ – ಪೊಲೀಸ್ ಇಲಾಖೆ ಎಚ್ಚರಿಕೆ..!?

Spread the love



ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಫೆಬ್ರವರಿ 19 ರಂದು ಪೊಲೀಸ್ ಅಧೀಕ್ಷಕ ಸಿ.ಕೆ. ಬಾಬಾ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.

ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಅನಧಿಕೃತವಾಗಿ ವದಂತಿಗಳನ್ನು ಹರಡುವುದು, ಜನರಲ್ಲಿ ಅಶಾಂತಿ ಉಂಟುಮಾಡುವ ಹತ್ಯಾಕಾಂಡ, ಗಲಭೆ, ನಿಂದನೆ ಹಾಗೂ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚುವುದು ಕಾನೂನುಬಾಹಿರ. ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು.

ಸಾಮಾಜಿಕ ಜಾಲತಾಣಗಳ ನಿಗಾ
ಸಭೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಅಗತ್ಯವಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಲು, ತಪ್ಪು ಮಾಹಿತಿಯನ್ನು ಹಂಚದಂತೆ ಎಚ್ಚರ ವಹಿಸಲು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.

ಕಾನೂನು ಕ್ರಮ ಹೇಗೆ?

ಐಟಿ ಕಾಯ್ದೆ, ಐಪಿಸಿ ಸೆಕ್ಷನ್‌ಗಳ ಪ್ರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

ಅಪಪ್ರಚಾರ, ದುರುದ್ದೇಶಪೂರಿತ ಪೋಸ್ಟ್ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ಹಂಚಿಕೆಗಳಿಗೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಬಹುದು.

ಅಪಪ್ರಚಾರ ನಿರೋಧನೆಗಾಗಿ ವಿಶೇಷ ತಂಡ ರಚನೆ – ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ.


ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಎಚ್ಚರಿಕೆ
ಪೋಲೀಸ್ ಇಲಾಖೆ ಈ ಸಭೆಯ ಮೂಲಕ ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಯಾವುದೇ ಖಚಿತ ಮಾಹಿತಿ ಇಲ್ಲದಿರುವಾಗ ಯಾವುದೇ ಪೋಸ್ಟ್ ಹಂಚದಿರಿ. ಸಾಮಾಜಿಕ ಜಾಲತಾಣಗಳನ್ನು ಮೌಜು-ಮಸ್ತಿಗಾಗಿ ಬಳಸದೇ, ಜವಾಬ್ದಾರಿಯುತವಾಗಿ ಬಳಸಿ. ಇಲ್ಲದಿದ್ದರೆ ಕಾನೂನು ಸಂಹಿತೆಯ ಪ್ರಕಾರ ಕ್ರಮ ಅನುಭವಿಸಬೇಕಾಗುತ್ತದೆ.

WhatsApp Image 2025-06-21 at 19.57.59
Trending Now