September 10, 2025
sathvikanudi - ch tech giant

ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕರ ಮಾಹಿತಿಗಾಗಿ.!

Spread the love



112 ಸಹಾಯವಾಣಿಗೆ ಅನಗತ್ಯ ಕರೆಗಳನ್ನು ತಡೆಯಲು ಕ್ರಮ:

ಹೆಚ್ಚುತ್ತಿರುವ ಅನಗತ್ಯ ಕರೆಗಳು:
ಇತ್ತೀಚಿಗೆ 112 ಸಹಾಯವಾಣಿಗೆ ಅನಗತ್ಯವಾಗಿ ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಕಾರಣವಿಲ್ಲದೆ ಇಂತಹ ಕರೆಗಳು ಸಣ್ಣ-ಪುಟ್ಟ ವಿಚಾರಗಳಿಗೆ ಹೊಯ್ಸಳ ಸಿಬ್ಬಂದಿಯನ್ನು ಕರೆಸಿ, ಕಮಾಂಡ್ ಸೆಂಟರ್ ಮತ್ತು ಸಿಬ್ಬಂದಿಯ ಸಮಯವನ್ನು ವ್ಯರ್ಥ ಮಾಡಿಸುತ್ತಿವೆ. ಈ ಸಂದರ್ಭದಲ್ಲಿ, ನಿಜವಾದ ಸಮಸ್ಯೆಯಲ್ಲಿರುವವರಿಗೆ ತಕ್ಷಣದ ನೆರವು ಸಿಗದೇ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ.

ಜೀವ ರಕ್ಷಣೆ ಮತ್ತು ಕರೆಯ ನಿಜತೆ:
ನಿಮ್ಮ ಟೈಂಪಾಸ್ ಮಾಡುವ ಸಮಯದಲ್ಲಿ ಒಂದು ಜೀವ ಹೋಗಬಹುದಾದ ಸಂಭವವಿದೆ. ಆತ್ಮಹತ್ಯೆಗೆ ಯತ್ನಿಸುತ್ತಿರುವವರು ಅಥವಾ ಅಮಾಯಕರ ಮೇಲೆ ರೌಡಿಗಳು ಹಲ್ಲೆ ಮಾಡುತ್ತಿರುವ ಸಂದರ್ಭಗಳಲ್ಲಿ, ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತಲುಪಿದರೆ ಜೀವ ಉಳಿಸಬಹುದಾಗಿದೆ. ಆದ್ದರಿಂದ, ಹುಡುಗಾಟಿಕೆಗೆ 112 ಕ್ಕೆ ಕರೆ ಮಾಡುವುದನ್ನು ನಿಲ್ಲಿಸಿ.

ಕಠಿಣ ಕ್ರಮಗಳು:
ಇನ್ನು ಮುಂದೆ ಇಂತಹ ಅನಗತ್ಯ ಕರೆಗಳು ಬಂದಲ್ಲಿ ಅಂತಹ ನಂಬರನ್ನು 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗುತ್ತದೆ. ಪದೇ ಪದೇ ಫ್ರಾಡ್ ಕಾಲ್ ಮಾಡುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

WhatsApp Image 2025-06-21 at 19.57.59
Trending Now