
ತುಮಕೂರು ಜಿಲ್ಲೆ, ತುರುವೇಕೆರೆ:
ತಾಲೂಕಿನ ಮಾಯಸಂದ್ರ ರಸ್ತೆಯ ಫಾರಂ ಹೌಸ್‌ನಲ್ಲಿ ಮಾಜಿ ಶಾಸಕರಾದ ಮಸಾಲ ಜಯರಾಮ್ ರವರು ಪತ್ರಿಕಾಗೋಷ್ಠಿ ನಡೆಸಿ, ತುರುವೇಕೆರೆ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಗಾಂಜಾ ಹಾಗೂ ಡ್ರಗ್ಸ್ ದಂಧೆ ಹಾವಳಿ ಹೆಚ್ಚುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಪೊಲೀಸ್ ಇಲಾಖೆ ದಂದೆಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದಲ್ಲಿ, ಅವರುಗಲೇ ಈ ಮಾಫಿಯಾದ ಬೆಂಬಲಗಾರರಾಗಿದ್ದಾರೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಯುವಜನತೆ ಕಣ್ಣ ಮುಂದೆನೇ ನಾಶವಾಗುತ್ತಿದ್ದಾರೆ. ಬೈಕ್ ವೀಲಿಂಗ್, ಬಾಲಕಿಯರ ಚುಡಾಯಿಸುವುದು, ಬಾಲಕಿರ ಮೇಲೆ ಅತ್ಯಾಚಾರ ಎಸಗುವುದು ಚಾಕುವಿನಿಂದ ಹಲ್ಲೆ ಮಾಡುವುದು ಇದೆಲ್ಲವೂ ಈ ಮಾದಾಕ ವಸ್ತುಗಳ ಪ್ರಭಾವದಿಂದನೇ! ಹತ್ತಿರದ ಅಂಕಾಳ ಕೊಪ್ಪ ಗ್ರಾಮದಲ್ಲಿ ಈಗಾಗಲೇ ಡ್ರಗ್ಸ್ ಕಾರಣದಿಂದಾಗಿ ಒಂದು ಕೊಲೆಯೂ ನಡೆದಿದ್ದು, ಇದು ಎಚ್ಚರಿಕೆಯ ಗಂಟೆಯಾಗಿದೆ” ಎಂದು ಹೇಳಿದರು.
“ನಮ್ಮ ತಿಳಿವಳಿಕೆ ಪ್ರಕಾರ, ಕೆಲವು ಪೋಲೀಸರು ಈ ಮಾಫಿಯಾಗೆ ಮಾಹಿತಿ ನೀಡಿ ರಕ್ಷಣೆ ನೀಡುತ್ತಿದ್ದಾರೆ”,ಎಂದು ಭಾವಿಸುತ್ತಿರುವುದು ತಪ್ಪಿಲ್ಲ.
ಮಾಜಿ ಶಾಸಕರು ವಿಶೇಷವಾಗಿ ಮಾತನಾಡಿ ಮಾಯಸಂದ್ರ ಟಿಬಿ ಕ್ರಾಸ್ ಬಳಿ ಕಳೆದೆರಡು ದಿನಗಳ ಇಂದೇ ಅಂಗಡಿಕಾನ ಮೇಲಿನ ದಾಳಿ, ಮೊಬೈಲ್ ಕದಿಯುವ ಪ್ರಕರಣ ಮತ್ತು ಡಾಬಾದ ಬಳಿ ವ್ಯಕ್ತಿಯ ಹೊಟ್ಟೆಗೆ ಚಾಕು ಹಾಕಿದ ಘಟನೆಗಳನ್ನು ಉಲ್ಲೇಖಿಸಿ, “ಇವುಗಳೆಲ್ಲಾ ಪೊಲೀಸ್ ನಿರ್ಲಕ್ಷ್ಯದ ಫಲ” ಎಂದರು.
“ಗಾಂಜಾ–ಡ್ರಗ್ಸ್ ವಿರುದ್ಧ ಈ ಸಚಿವರೂ, ಜಿಲ್ಲಾಧಿಕಾರಿಯೂ ತಕ್ಷಣ ತನಿಖೆ ಕೈಗೊಂಡು, ಡ್ರಗ್ಸ್ ಪೆಡ್ಲರ್‌ಗಳ ಹಿಂದಿರುವ ಮುಖಂಡರು ಯಾರೇ ಆಗಿರಲಿ ಕಾನೂನಿನ ಪಾಠ ಕಲಿಸಬೇಕು” ಎಂಬುದಾಗಿ ಆಗ್ರಹಿಸಿದರು. ಇಲ್ಲವಾದರೆ “ಮುಂದಿನ ಹಂತದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಎದುರು ಧರಣಿಗೆ ತಯಾರಿ” ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಪ್ರಮುಖರು:
ವಿ.ಬಿ. ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ, ಟೌನ್ ಜಗದೀಶ್, ಸೋಮೇನಹಳ್ಳಿ ಆಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ದೊಂಬರನಹಳ್ಳಿ ಬಸವರಾಜ್, ರಾಮಕೃಷ್ಣ ಮತ್ತು ಇನ್ನೂ ಹಲವರು
ವರದಿ: ✍🏻ಮಂಜುನಾಥ್ ಕೆ.ಎ., ತುರುವೇಕೆರೆ