September 9, 2025
sathvikanudi - ch tech giant

ತುಮಕೂರು HP ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ವಂಚನೆ ₹110 ಗೆ  300 Ml ಪೆಟ್ರೋಲ್ ಮಾತ್ರ…..!?

Spread the love

ತುಮಕೂರು ಹೆಚ್ಪಿ ಪೆಟ್ರೋಲ್ ಬಂಕಿನಲ್ಲಿ ನಡೆದಿರುವ ವಂಚನೆಯ ಪ್ರಕರಣವು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. ₹110 ಗೆ ಕೇವಲ 300 ಮಿಲೀ ಪೆಟ್ರೋಲ್ ಸಿಕ್ಕಿದ ಕಾರಣದಿಂದ ದ್ವಿಚಕ್ರ ವಾಹನ ಸವಾರರು ಶಾಕ್ ಆಗಿದ್ದಾರೆ.

ನಗರದ ಕುಣಿಗಲ್ ರಸ್ತೆಯ ಸಾಹುಕಾರ್ ಫ್ಯುಯೆಲ್ ಪಾರ್ಕ್ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಸವಾರರು ಬಿಲ್ ತಗೆಯುವ ವೇಳೆ ವಂಚನೆಯ ಸತ್ಯ ಹೊರಬಿದ್ದಿತು. ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ನವರು ಸೂಕ್ತ ಉತ್ತರ ನೀಡದೆ ಉಡಾಫೆಯ ಮಾತುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.

ಸ್ಥಳೀಯರು ಹೇಳುವ ಪ್ರಕಾರ, ಪೆಟ್ರೋಲ್ ಬಂಕ್ ನವರು ಸಾಮಾನ್ಯ ಪೆಟ್ರೋಲ್ ಮುಗಿದಿದೆ ಎಂದು ಹೇಳಿ ಪವರ್ ಪೆಟ್ರೋಲ್ ನೀಡಲು ಬಲವಂತ ಪಡಿಸುತ್ತಿದ್ದಾರೆ. ಪವರ್ ಪೆಟ್ರೋಲ್ ನ ಬೆಲೆ ಸಾಮಾನ್ಯ ಪೆಟ್ರೋಲ್ ಗಿಂತ ಹೆಚ್ಚಿನದು, ಇದರಿಂದ ಗ್ರಾಹಕರಿಗೆ ಹಣದ ನಷ್ಟವಾಗುತ್ತಿದೆ.

ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕಾನೂನು ಕ್ರಮ ಏನಾಗುತ್ತದೆಯೆಂದು ಸ್ಥಳೀಯರು ಕಾದುನೋಡುತ್ತಿದ್ದಾರೆ. ಇಂತಹ ಘಟನೆಗಳು ಪುನಃ ನಡೆಯದಂತೆ ದೃಢವಾದ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಜನರು ಆಗ್ರಹಿಸುತ್ತಿದ್ದಾರೆ.

ಈ ಘಟನೆಯು ಜನರಲ್ಲಿ ಪೆಟ್ರೋಲ್ ಬಂಕ್ ಗಳ ಬಗ್ಗೆ ಶಂಕೆ ಮೂಡಿಸಿದೆ ಮತ್ತು ಪ್ರಾಮಾಣಿಕ ಸೇವೆಗಾಗಿ ಸೂಕ್ತ ನಿಯಮಗಳು ಮತ್ತು ನಿಗಾವಳಿ ವ್ಯವಸ್ಥೆ ಇರಬೇಕೆಂಬ ಅಗತ್ಯವಿದೆ.

WhatsApp Image 2025-06-21 at 19.57.59
Trending Now