September 9, 2025
sathvikanudi - ch tech giant

ಕೋಲಾರದಲ್ಲಿ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಕೇಸ್ ವರ್ಕರ್!

Spread the love



ಸರ್ಕಾರಿ ಕಚೇರಿಗಳಲ್ಲಿ ಲಂಚ ಪ್ರಕ್ರಿಯೆ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದ್ದು, ಈ ಬಾರಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಯೊಬ್ಬಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋಲಾರ ಉಪವಿಭಾಗಾಧಿಕಾರಿ ಕಚೇರಿಯ ಕೇಸ್ ವರ್ಕರ್ ಕೋಮಲಾ, ಪೌತಿ ಖಾತೆ ಮಾಡಿಕೊಡಲು ಒಬ್ಬ ನಾಗರಿಕನ ಬಳಿ 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, 20 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿ ಅವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.

ಲಂಚ ಪ್ರಕರಣ: ಸರ್ಕಾರಿ ವ್ಯವಸ್ಥೆಯ ಭ್ರಷ್ಟ ಮುಖ:

ಸಾರ್ವಜನಿಕರು ತಮ್ಮ ಹಕ್ಕಿನ ಸೇವೆ ಪಡೆಯಲು ಸರ್ಕಾರಿ ನೌಕರರಿಗೆ ಲಂಚ ಕೊಡುವ ಪರಿಸ್ಥಿತಿ ತಲುಪಿರುವುದು ಖಂಡನೀಯ. ನ್ಯಾಯ ನಿರ್ವಹಣೆ, ಭ್ರಷ್ಟಾಚಾರದ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ಲಂಚದ ಹಾವಳಿಯಲ್ಲಿ ಸಿಕ್ಕಿಬಿದ್ದಿರುವುದು ಆಡಳಿತದ ವಿಫಲತೆಯನ್ನು ತೋರಿಸುತ್ತದೆ.


ಇಂತಹ ಘಟನೆಯು ಸರ್ಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ನಾಗರಿಕರು ಸರಕಾರದಿಂದ ಸುಗಮ ಸೇವೆ ಪಡೆಯಬೇಕಾದರೆ, ಇಂತಹ ಲಂಚಖೊರ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ವಿಧಿಸಬೇಕು. ಲಂಚ ತಡೆಯಲು ಕೇವಲ ಲೋಕಾಯುಕ್ತ ದಾಳಿ ಸಾಕಾಗದು, ಸುದ್ದಿ ಪ್ರಕಟಣೆ, ಸಾರ್ವಜನಿಕ ಜಾಗೃತಿ ಮತ್ತು ಸರ್ಕಾರದ ಗಂಭೀರ ಕ್ರಮ ಅಗತ್ಯ.


ಇಂತಹ ಪ್ರಕರಣಗಳು ಭವಿಷ್ಯದಲ್ಲಿ ಪುನರಾವೃತ್ತಿಯಾಗದಂತೆ ಸರ್ಕಾರ ಲಂಚಖೋರ ಅಧಿಕಾರಿಗಳಿಗೆ ತೀವ್ರ ಶಿಕ್ಷೆ ನೀಡಬೇಕು. ಪೌತಿ ಖಾತೆ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳನ್ನು ಲಂಚ ಇಲ್ಲದೆ, ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಜೆಗಳ ಹಿತಕ್ಕಾಗಿ, ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

WhatsApp Image 2025-06-21 at 19.57.59
Trending Now