October 27, 2025
sathvikanudi - ch tech giant

ತಮ್ಮ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಶಾಸಕರಿಂದ ಜಿಲ್ಲಾ ವರಿಷ್ಠಧಿಕಾರಿಗಳಿಗೆ ಮನವಿ….!

Spread the love



ಶಿವಮೊಗ್ಗ: ಹೊಳೆಹೊನ್ನೂರು ಮತ್ತು ಆನವೇರಿ ಗ್ರಾಮಗಳಲ್ಲಿ ಅಕ್ರಮವಾಗಿ ಜೂಜೂ, ಗಾಂಜಾ ಮಾರಾಟ, ಓಸಿ, ಐಪಿಎಲ್ ಬೆಟ್ಟಿಂಗ್ ಹಾಗೂ ಮರಳು ಸಾಗಣೆ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಮಿಥುನ್ ಕುಮಾರ್ ಅವರ ಕಚೇರಿಗೆ  ಶಾಸಕರಾದ ಶಾರದ ಪುರ್ಯಾನಾಯಕ್ ಹಾಗೂ ಹೊಳೆಹೊನ್ನೂರು ಮತ್ತು ಆನವೇರಿಯ ಗ್ರಾಮಸ್ಥರು  ಭೇಟಿ ನೀಡಿ, ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದರು. ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ನಿರ್ಭೀತಿಯಿಂದ ನಡೆಯುತ್ತಿದ್ದು, ಇದು ಯುವಜನತೆಗೆ ಕೇಡು ತರಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಗ್ರಾಮಸ್ಥರ ಪ್ರಕಾರ, ಜೂಜಾ ಅಡ್ಡೆಗಳು, ಗಾಂಜಾ ಮಾರಾಟ ಹಾಗೂ ಐಪಿಎಲ್ ಬೆಟ್ಟಿಂಗ್ ಉಗ್ರವಾಗಿ ನಡೆಯುತ್ತಿದ್ದು, ಇದರಿಂದಾಗಿ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದಲ್ಲದೆ, ಮರಳು ಮಾಫಿಯಾ ಕಾನೂನು ಮೀರಿ ಅಕ್ರಮವಾಗಿ ನದಿಯಿಂದ ಮರಳು ತೆಗೆಯುತ್ತಿರುವುದು ಪರಿಸರ ಸಮತೋಲನಕ್ಕೆ ಹಾನಿ ಮಾಡುತ್ತಿದೆ.

ಗ್ರಾಮಸ್ಥರು ಪೊಲೀಸ್ ಇಲಾಖೆ ತ್ವರಿತವಾಗಿ ಕ್ರಮ ಕೈಗೊಂಡು ಈ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬೇಕು ಹಾಗೂ ಸಂಬಂಧಿತ ಅಪರಾಧಿಗಳನ್ನು ಕಾನೂನಿನ ಚಟುವಟಿಕೆಯಡಿ ತರಬೇಕು ಎಂದು ಆಗ್ರಹಿಸಿದರು. ಎಸ್.ಪಿ ಮಿಥುನ್ ಕುಮಾರ್ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

WhatsApp Image 2025-06-21 at 19.57.59
Trending Now