September 10, 2025
sathvikanudi - ch tech giant

ಕೊಲೆಯ ಶಂಕೆ: ಟಾಟಾ ಏಸ್‌ ವಾಹನದಲ್ಲಿ ಸುಟ್ಟು ಸ್ಥಿತಿಯಲ್ಲಿ ಶವ ಪತ್ತೆ..!?

Spread the love



ತುಮಕೂರು ಜಿಲ್ಲೆ :

ಪಾವಗಡ ತಾಲೂಕಿನ ಬಳ್ಳಾರಿ ರಸ್ತೆಯ ವೀರಮ್ಮನಹಳ್ಳಿ ಗೇಟ್ ನಿಂದ ಪಲವಳ್ಳಿಗೆ ಮಾರ್ಗ ಮಧ್ಯದ ರೈಲ್ವೆ ಬ್ರಿಡ್ಜ್ ಸಮೀಪದಲ್ಲಿ  ಟಾಟಾ ಏಸ್‌ ವಾಹನದಲ್ಲಿ ವಾಹನ ಸಮೇತ ಸುಟ್ಟು ಕರುಕಲು ಸ್ಥಿತಿಯಲ್ಲಿ ಶವ ಪತ್ತೆ ಈ ಘಟನೆ ಗುರುವಾರ ( ನೆನ್ನೆ )ರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ಮೃತಪಟ್ಟ ವ್ಯಕ್ತಿಯು ವೈ. ಎನ್ ಹೊಸಕೋಟೆ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 45 ವರ್ಷದ ರವಿಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ನೀಡಿದ ಮಾಹಿತಿಯ ಆಧಾರದ ಮೇಲೆ, ಪಾವಗಡ ಪೊಲೀಸ್‌ ಠಾಣೆ ಸಿಪಿಐ ಸುರೇಶ್‌ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಈ ಘಟನೆ ಅತ್ಯಂತ ಅನುಮಾನಾಸ್ಪದವಾಗಿದ್ದು, ಕೊಲೆ ಅಥವಾ ಇತರ ಕ್ರಿಮಿನಲ್ ಕೃತ್ಯಗಳ ಶಂಕೆಯನ್ನು ಹುಟ್ಟಿಸುತ್ತಿದೆ. ಸ್ಥಳೀಯರು ಈ ಪ್ರಕರಣವನ್ನು ವ್ಯಾಪಕವಾಗಿ ಚರ್ಚಿಗೆ ಒಲಗಾಗಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ತನಿಖೆ ಮುಂದುವರಿಯುತ್ತಿದ್ದು, ಪ್ರಾಥಮಿಕ ತನಿಖೆ ವರದಿಯೊಂದಿಗೆ ಮುಂದಿನ ಕ್ರಿಯೆಗಳನ್ನು ಕೈಗೊಳ್ಳಲು ಪೊಲೀಸರು ನಿರೀಕ್ಷಿಸುತ್ತಿದ್ದಾರೆ.

WhatsApp Image 2025-06-21 at 19.57.59
Trending Now