September 9, 2025
sathvikanudi - ch tech giant

ಪತ್ನಿಯ ಮೊಬೈಲ್ ಚಟಕ್ಕೆ ಕೋಪಗೊಂಡ ಪತಿ – ಕತ್ತಿಯಿಂದ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ!?

Spread the love


ಉಡುಪಿ ಜಿಲ್ಲೆ ಬ್ರಹ್ಮಾವರ :


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದ ಘೋರ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ವಿಷಾದ ಹುಟ್ಟಿಸಿದೆ. ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿರಾಯ ತನ್ನ ಹೆಂಡತಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ ಅಸಹನೀಯ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ರೇಖಾ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಗಣೇಶ್ ಪೂಜಾರಿ ಅವರೇ ಈ ಕ್ರೂರ ಕೃತ್ಯಕ್ಕೆ ಕೈಹಾಕಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ, ಸಂಸಾರದಲ್ಲಿ ತೀವ್ರಮನಸ್ತಾಪ, ದಿನಾ ಜಗಳ  ಮತ್ತು ಪತ್ನಿಯ ಮೊಬೈಲ್ ಚಟವನ್ನು ಮುಖ್ಯ ಕೆಲಸವಾಗಿ ಮಾಡಿಕೊಂಡು ಮನೆಯಲ್ಲೇ ಕಿರಿ ಕಿರಿ ನಡೆಯುತ್ತಿದ್ದ ಬಗ್ಗೆ ಮಾಹಿತಿ

ಘಟನೆಯ ದಿನವೂ ಜಗಳ ಉಲ್ಬಣಗೊಂಡಿದ್ದು, ಸಿಟ್ಟಿಗೆದ್ದ ಗಣೇಶ್ ತನ್ನ ಪತ್ನಿ ರೇಖಾ ಅವರ ಮೇಲೆ ಹಲ್ಲೆ ನಡೆಸಿದನು. ಕತ್ತಿಯಿಂದ ನಡೆದ ಈ ಜಗಳದಲ್ಲಿ ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಧಾವಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸುವ ತಯಾರಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

WhatsApp Image 2025-06-21 at 19.57.59
Trending Now