September 10, 2025
sathvikanudi - ch tech giant

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯ ಕ್ಲಿನಿಕ್‌ಗಳ ವೇಳಾಪಟ್ಟಿ ಬದಲಾವಣೆ.!

Spread the love

ತುಮಕೂರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಮ್ಮ ಕ್ಲಿನಿಕ್‌ಗಳ ವೇಳಾಪಟ್ಟಿ ಬದಲಾವಣೆಗೊಂಡಿದೆ.

ಪ್ರಸ್ತುತ ಮರಳೂರು ದಿಣ್ಣೆ ಹಾಗೂ ದಿಟ್ಟೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ಗಳು ಹೊಸ ವೇಳಾಪಟ್ಟಿಯ ಅನ್ವಯ ಮದ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ಡಿಎಚ್ ಓ ಡಾ. ಮಂಜುನಾಥ್‌ ತಿಳಿಸಿದ್ದಾರೆ.

ನಗರದಲ್ಲಿ ಒಟ್ಟು 7 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಬದಲಾವಣೆಯು ಹೆಚ್ಚಿನ ಜನತೆಗೆ ಉತ್ತಮ ಸೇವೆ ನೀಡಲು ಸರ್ಕಾರದ ಆದೇಶದಂತೆ ನಿರ್ಧರಿಸಲಾಗಿದೆ.

ಈ ಹೊಸ ವೇಳಾಪಟ್ಟಿಯು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲು ಮತ್ತು ಆರೋಗ್ಯ ಸೇವೆಗಳನ್ನು ಸುಗಮವಾಗಿ ಪಡೆಯಲು ಸಹಾಯವಾಗಲಿದೆ.

ಜಿಲ್ಲೆಯ ಜನರು ಈ ಬದಲಾವಣೆಯನ್ನು ಗಮನಿಸಿ, ತಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಕಾಲದಲ್ಲಿ ಕ್ಲಿನಿಕ್‌ಗಳನ್ನು ಸಂಪರ್ಕಿಸಬಹುದಾಗಿದೆ.

WhatsApp Image 2025-06-21 at 19.57.59
Trending Now