September 9, 2025
sathvikanudi - ch tech giant

ಅನೈತಿಕ ಸಂಬಂಧ ಒಂದಿದ್ದ ಪತಿಯನ್ನ ಕಲ್ಲು ಎತ್ತಿಹಾಕಿ ಕೊಲೆಗೈದಾ ಪತ್ನಿ…..!?

Spread the love

ಹೊಳಲ್ಕೆರೆ :

ಹೊಳಲ್ಕೆರೆ ತಾಲ್ಲೂಕು ಕಂಬದೇವರಹಟ್ಟಿಯಲ್ಲಿ ಪತಿ ಮೇಲೆ ಪತ್ನಿಯೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಮೃತ ಪತಿ ಕೃಷ್ಣಪ್ಪ (46) ಅವರ ಪತ್ನಿ ಕಮಲಮ್ಮ ಈ ಕೊಲೆಗೈದಿದ್ದಾರೆ. ಅನೈತಿಕ ಸಂಬಂಧವು ಈ ಹತ್ಯೆಗೆ ಕಾರಣವಾಗಿದೆ. ತಾಳಿ ಕಟ್ಟಿದ ಗಂಡನನ್ನೇ ಮನೆಯ ಮುಂಭಾಗ ಮಲಗಿದ್ದ ವೇಳೆ, ನಿನ್ನೆ ತಡರಾತ್ರಿ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ…

ಸ್ಥಳಕ್ಕೆ ಡಿವೈಎಸ್ಪಿ ದಿನಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣಪ್ಪನವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳೀಯರು ಈ ಭೀಕರ ಘಟನೆಯನ್ನು ಆಘಾತದಿಂದ ಕೇಳಿದ್ದಾರೆ.

ಅನೈತಿಕ ಸಂಬಂಧವು ಕುಟುಂಬದ ಶಾಂತಿಯನ್ನೇ ನಾಶಮಾಡಿ, ಕೊಲೆ ಮಾಡುವ ಮಟ್ಟಿಗೆ ತಲುಪಿರುವುದು ದುರ್ಬಾಗ್ಯಕರ ಸಂಗತಿ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕಮಲಮ್ಮನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ದಾಂಪತ್ಯದ ಸಂಬಂಧಗಳಲ್ಲಿ ಸಾಮರಸ್ಯ, ವಿಶ್ವಾಸ ಮತ್ತು ಸಹಬಾಳ್ವೆ ಮಹತ್ವದ ಹಿನ್ನೆಲೆ ಇರಬೇಕು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಪೊಲೀಸರಿಂದ ಹೆಚ್ಚಿನ ಮಾಹಿತಿ ಸಿಕ್ಕಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

WhatsApp Image 2025-06-21 at 19.57.59
Trending Now