September 9, 2025
sathvikanudi - ch tech giant

ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಕೊಲೆಯ ದೃಶ್ಯ: ಸುಶೀಲ ಕಾಳೆ ಹತ್ಯೆ ಪ್ರಕರಣದಲ್ಲಿ ಮಹತ್ವದ ಬಗೆಹರಿವು!?

Spread the love




ವಿಜಯಪುರ: ಭೀಮಾತೀರದಲ್ಲಿ ನಡೆದಿದ್ದ ಹೃದಯವಿದ್ರಾವಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳು ಹೊರಬಿದ್ದಿವೆ. ವಿಜಯಪುರ ನಗರದ ಎಸ್‌ಎಸ್ ಕಾಂಪ್ಲೆಕ್ಸ್ ಬಳಿ ಜುಲೈ 14ರಂದು ನಡೆದಿದ್ದ ಹತ್ಯೆದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳಲ್ಲಿ ದ್ರಾಕ್ಷಣವಾಗಿ ಸುಶೀಲ ಕಾಳೆ ಎಂಬ ಹರಿಜನ ಯುವಕನನ್ನು ಕೆಲವು ದುಷ್ಕರ್ಮಿಗಳು ಮಚ್ಚು ಹಾಗೂ ಚಾಕುಗಳಿಂದ ಹತ್ಯೆ ಮಾಡುತ್ತಿರುವ ಭೀಕರ ದೃಶ್ಯ ಕಾಣಿಸುತ್ತಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ, ಸುಶೀಲ ಕಾಳೆ ಮೇಲೆ ಏಕಾಏಕಿ ಹಲವು ಮಂದಿ ಹಲ್ಲೆ ನಡೆಸಿದ ದೃಶ್ಯಗಳು ದಾಖಲಾಗಿದ್ದು, ಅವರು ಆತನನ್ನು ರಕ್ತದ ಮಡುವಿನಲ್ಲಿ ಬಿದ್ದರೂ ಬಿಡದೇ ಸತತವಾಗಿ ಚಾಕುಗಳಿಂದ ಕೊಚ್ಚಿದ ದೃಶ್ಯ ಬಹಿರಂಗವಾಗಿದೆ. ಹತ್ಯೆದಾರರ ಕ್ರೌರ್ಯವನ್ನು ನೋಡುವುದಕ್ಕೆ ಸಾಧ್ಯವಿಲ್ಲದಷ್ಟು ಕ್ರೂರತೆ ಯನ್ನು ಕಾಣಬಹುದು,



ಪ್ರಕರಣದ ತನಿಖೆಯಲ್ಲಿ ಪ್ರಮುಖವಾಗಿ ಮುನ್ನಡೆ ಸಾಧಿಸಿರುವ ಗಾಂಧಿಚೌಕ್ ಠಾಣೆಯ ಪೊಲೀಸರು, ಈಗಾಗಲೇ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳು ಹಾಗೂ ಎಸ್‌ಸಿ/ಎಸ್‌ಟಿ ಅಟ್ಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದೆ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ನಿರೀಕ್ಷೆಯಿದೆ.

ಹತ್ಯೆಯ ಹಿಂದೆ ಯಾವುದೇ ವೈಯಕ್ತಿಕ ವೈಷಮ್ಯ, ಪ್ರೀತಿವಿವಾದ ಅಥವಾ ಆರ್ಥಿಕ ವ್ಯವಹಾರಗಳ ಕಾರಣವಿದೆಯೆಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದು, ಈ ದಿಕ್ಕಿನಲ್ಲಿ ತನಿಖೆ ಮುಂದುವರೆದಿದೆ. ಕೊಲೆಯ ಹಿಂದಿರುವ ನಿಖರ ಕಾರಣಗಳು ಮಾತ್ರ ಮುಂದಿನ ವಿಚಾರಣೆಯಲ್ಲಿಯೇ ಬೆಳಕಿಗೆ ಬರಲಿವೆ.

ಹಂತಕರ ವಿರುದ್ಧ ಕಠಿಣ ಶಿಕ್ಷೆ ನೀಡಬೇಕೆಂಬ ಸುಶೀಲ ಕಾಳೆ ಕುಟುಂಬಸ್ಥರು ಹಾಗೂ ಸಮುದಾಯದವರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಈ ಹತ್ಯೆ ಪ್ರಕರಣದಿಂದಾಗಿ ವಿಜಯಪುರ ನಗರದಲ್ಲಿ ತೀವ್ರ ಕುತೂಹಲ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ.

WhatsApp Image 2025-06-21 at 19.57.59
Trending Now