October 27, 2025
sathvikanudi - ch tech giant

ಬೆಂಗಳೂರಿನಲ್ಲಿ ಚಿನ್ನ ಕದ್ದ ಖತರ್ನಾಕ್ ಕಳ್ಳನ ಬಂಧನ…!?

Spread the love

ಶಿವಮೊಗ್ಗ :


ಬೆಂಗ್ಳೂರಿನಲ್ಲಿ 1 ಕೆಜಿ ಚಿನ್ನ ಕದ್ದ ಖತರ್ನಾಕ್ ಕಳ್ಳನೊಬ್ಬನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಹಮೀದ್ ಹಂಜ ಎಂಬಾತ, ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿದ ನಂತರ, ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತನ್ನ ಮನೆಯಲ್ಲಿ ಚಿನ್ನವನ್ನು ಹೂತಿಟ್ಟಿದ್ದ.

ಮಾಗಡಿ ಪೊಲೀಸರು ಹಂಜನನ್ನು ಬಂಧಿಸಿ, ಸುಮಾರು 1 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿದ್ದಾರೆ. ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 70 ರಿಂದ 80ಕ್ಕೂ ಹೆಚ್ಚು ಕೇಸ್‍ಗಳು ನೋಂದಾಯಿತವಾಗಿವೆ. ಈತನ ಹೆಸರು ಆಗುಂಬೆ ಸಮೀಪದಲ್ಲಿ ನಡೆದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲಿಯೂ ಕೇಳಿಬರುತ್ತದೆ.

ಹಂಜ ಕೊಲೆ, ವಸೂಲಿ ಮತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ, ಆತನ ವಿರುದ್ಧ ಕ್ರಮವಹಿಸಲು ಮಾಗಡಿ ಪೊಲೀಸರು ಸಿದ್ಧತೆಯನ್ನು ಮುಂದಿಟ್ಟಿದ್ದಾರೆ. ಹಂಜ ಈಗ ಮಾಗಡಿ ಪೊಲೀಸ್ ಠಾಣೆಯ ಅತಿಥಿಯಾಗಿದ್ದು, ಪೊಲೀಸ್ ತನಿಖೆ ಮುಂದುವರಿಯುತ್ತಿದೆ.

WhatsApp Image 2025-06-21 at 19.57.59
Trending Now