
ಸರ್ಕಾರಿ ಶಾಲೆಯ ಗೋಳು ಹೇಳೋರು ಇಲ್ಲ ಕೇಳೋರು ಇಲ್ಲ ಅಧಿಕಾರಿಗಳು ಆಡಿದ್ದೇ ಆಟ
ಗ್ರಾಮ ಪಂ ಅಧ್ಯಕ್ಷರೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ… ಸಂಬಂಧಪಟ್ಟ ಅಧಿಕಾರಿಗಳೆ… ಇತ್ತ ಗಮನಹರಿಸಿ
ಅದು ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆ ಮಕ್ಕಳು ಚೆನ್ನಾಗಿ ಓದಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಅಂತ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸ್ತಾರೆ ಆದ್ರೆ ಈ ಶಾಲೆಯ ಪರಿಸ್ಥಿತಿ ನೋಡಿದ್ರೆ ಸರ್ಕಾರಿ ಶಾಲೆ ಅಂದ್ರೆ ಹೀಗಿರುತ್ತಾ ಅಂತ ಒಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರಂಟಿ ಹಾಗಾದ್ರೆ ಆ ಶಾಲೆ ಯಾವ್ದು ಅಂತೀರಾ ನಾವು ನಿಮಗೆ ತೋರಿಸ್ತೀವಿ ನೋಡಿ..

ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣ ಸಂಸ್ಥೆಗಳು ಮಾದರಿಯಾಗಿರಬೇಕು ಎಲ್ಲಾ ಸೌಲಭ್ಯಗಳನ್ನು ಹೊಂದಿ ಶಿಕ್ಷಣದ ಜೋತೆಗೆ ಸಾಮಾಜಿಕ ನೆಲೆಯನ್ನು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಆದರೆ ಯುವ ಶಕ್ತಿಯನ್ನು ರೂಪಿಸಬೇಕಾದ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೆ ಏನಾಗುತ್ತದೆ ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆ ಮಾತಂತಾಗುತ್ತದೆ ಯುವ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಾದ ಶಾಲೆಯ ರಸ್ತೆ ಕೆಸರುಗದ್ದೆಯಾಗಿದ್ದು ಕೆಸರು ಬಿದ್ದ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುತ್ತಿರುವ ಮಕ್ಕಳ ಪರಿಸ್ಥಿತಿ ಹೇಳತೀರಾದಾಗಿದೆ.

ಎಲ್ಲೆಂದರಲ್ಲಿ ಮೈದಾನದಲ್ಲಿ ನಿಂತ ನೀರು ಕೆಸರಿನಂತದ ರಸ್ತೆ ಈ ದೃಶ್ಯಾವಳಿ ಕಂಡು ಬಂದಿದ್ದು ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಕರವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ
ಸರ್ಕಾರ ಲಕ್ಷ ಲಕ್ಷ ಅನುದಾನವನ್ನು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮಿಸಲಿಟ್ಟಿರುತ್ತಾರೆ ಆದರೆ ಹಾ ಅನುದಾನ ಸರ್ಕಾರಿ ಶಾಲೆಗೆ ತಲುಪುತ್ತ ಇದೆಯೋ ಇಲ್ಲವೂ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ
ಈ ಶಾಲೆಯಲ್ಲಿ ರಸ್ತೆ ಸಮಸ್ಯೆಇದ್ದು ನಿತ್ಯ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ ಕಣ್ಣೀರಿಟ್ಟುಕೊಂಡು ಕೈ ಕಾಲುಗಳನ್ನು ಕೆಸರು ಮಾಡಿಕೊಂಡು ಹೋಗಬೇಕಾದ ಸ್ಥಿತಿ ಉಂಟಾಗಿದೆ
ಈ ಬಗ್ಗೆ ಗ್ರಾಮಸ್ಥರಾದ ಕುಮಾರ ಮಾತಾನಾಡಿ ನಮ್ಮ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಶಾಲೆಯ ರಸ್ತೆ ಕೆಸರುಗದ್ದೆಯಾಗಿದೆ ಇದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಮಕ್ಕಳಿಗೆ ಸರಿಯಾದ ರಸ್ತೆ ಇಲ್ಲ ಆಟವಾಡಲು ಮೈದಾನವಿಲ್ಲ ಮೈದಾನದ ತುಂಬೆಲ್ಲ ನೀರು ನಿಂತು ಕೊಚ್ಚೆಯಾಗಿದೆ ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂ ಪಿ ಡಿ ಓ ಅಧ್ಯಕ್ಷರ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಇವರ ಮೇಲೆ ಅವರು ಅವರ ಮೇಲೆ ಇವರು ಹೇಳಿಕೊಂಡು ಸುಮ್ಮನಾಗುತ್ತಿದ್ದಾರೆ ಇದರಿಂದ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಯ್ತು ಎಂಬಾತಾಗಿದೆ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ ಆಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು..
ಮಹೇಂದ್ರ ಮಾತಾನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಿ ಎನ್ನುವ ಸರ್ಕಾರಗಳು ಒಮ್ಮೆ ಈ ಶಾಲೆ ಮಕ್ಕಳ ಪರಿಸ್ಥಿತಿ ನೋಡಿದರೆ ಸಾಕು ಅವರಿಗೆ ಅನಿಸುತ್ತದೆ ಸರ್ಕಾರಿ ಶಾಲೆಯ ಪರಿಸ್ಥಿತಿ ಏನೆಂದು ಶಾಲೆಯಲ್ಲಿ ಈ ರೀತಿಯ ಅವ್ಯವಸ್ಥೆ ಇದ್ದರೆ ಯಾರು ತಾನೇ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ ಇವೆಲ್ಲವನ್ನು ಕಂಡು ಸರ್ಕಾರಿ ಶಾಲೆಗೆ ಪಾಲಕರು ಮಕ್ಕಳನ್ನು ಸೇರಿಸುವುದನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಮೊದಲೇ ಅನೇಕ ರೋಗ ರುಜನಗಳು ಹೆಚ್ಚು ಮಳೆಯಿಂದ ನಿಂತ ನೀರಲ್ಲಿ ಸೊಳ್ಳೆ ಕೀಟಗಳಿಂದ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಇದಕ್ಕೆ ಹೊಣೆಯಾರು ಶಾಲೆ ಶಿಕ್ಷಕಿಯ ಅಥವಾ ಸರ್ಕಾರವ ಎಂದು ತಿಳಿಯುತ್ತಿಲ್ಲವೆಂದರು
ಗ್ರಾಮದ ರುದ್ರೇಶ್ ಮಾತಾನಾಡಿ ಮಕ್ಕಳಿಗೆ ಉಪಯೋಗವಾಗಲಿವೆಂದು ಹಲವಾರು ಬಾರಿ ರಸ್ತೆ ಸರಿಪಡಿಸಿಕೊಡಿಯೆಂದು ಅಧ್ಯಕ್ಷರಿಗೂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗು ತಿಳಿಸಿದರು ಏನು ಪ್ರಯೋಜನವಿಲ್ಲ ಸರ್ಕಾರಿ ಶಾಲೆ ಎಂಬ ತಾತ್ಸಾರ ಮನೋಭಾವದಿಂದ ಮೌನವಹಿಸುತ್ತಿದ್ದಾರೆ ಅಲ್ಲದೆ ಗ್ರಾಮ ಪಂಚಾಯಿತಿ ಪಿ ಡಿ ಓ ಅಧಿಕಾರಿಗಳನ್ನು ಕೇಳಿದರೆ ನಮ್ಮ ಪಂಚಾಯಿತಿಯಲ್ಲಿ ಯಾವ ಅನುದಾನವಿಲ್ಲವೆಂದು ಹೇಳುತ್ತಾರೆ ಈಗಾದರೆ ಮಕ್ಕಳ ಪರಿಸ್ಥಿತಿ ಏನು ನಾವು ಯಾರನ್ನು ಕೇಳಬೇಕು ಸ್ಥಳೀಯ ಶಾಸಕ ಸಿಮೆಂಟ್ ಮಂಜುರವರ ತವರು ಕ್ಷೇತ್ರದಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿ ಹೋಗಿದ್ದು ಶಾಸಕರು ಕೂಡ ಬಂದು ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ
ಇನ್ನೂ ಈ ಬಗ್ಗೆ ಗಮನಹರಿಸಬೇಕಾದ ಕ್ಷೇತ್ರ ಶಿಕ್ಷಣಧಿಕಾರಿಗಳು ಶಾಲೆಯ ಗುಣ ಮಟ್ಟವನ್ನು ವೀಕ್ಷಿಸದೆ ಇರುವುದು ದುರಂತದ ಸಂಗತಿಯಾಗಿದೆ ಈ ಕೊಡಲೇ ಈ ಬಗ್ಗೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ತಾಲ್ಲೂಕು ಪಂ ಇ ಓ ಗಮನಹರಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಮನವಿ
ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೋಟಿಗಟ್ಟಲೆ ಅನುದಾನವನ್ನು ಮಿಸಲಿರಿಸುತ್ತೆ ಆದ್ರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಕಾಮಗಾರಿಗಳು ಹಳ್ಳ ಹಿಡಿದು ಬಿಡುತ್ತದೆ ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅವರು ಈ ಬಗ್ಗೆ ಗಮನಹರಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮನಸ್ಸು ಮಾಡ್ತಾರ ಇಲ್ಲ ಮೌನಕ್ಕೆ ಶರಣಾಗತ್ತಾರ ಕಾದು ನೋಡಬೇಕಾಗಿದೆ..
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಹೇಂದ್ರ ಜಯಣ್ಣ ನವೀನ್ ಪ್ರಸನ್ನ ಶಶಾಂಕ್ ಅಪ್ಪುಇದ್ದರು
ವರದಿ : ಯೋಗೇಶ್ ಬಿ ಜೆ ಹಾಸನ ಜಿಲ್ಲೆ