September 10, 2025
sathvikanudi - ch tech giant

ಮತ್ತೊಮ್ಮೆ ರೈಲ್ವೆ ಕ್ರಾಂತಿಗೆ ಸಜ್ಜಾದ ಶ್ರೀ ಬಿ ವೈ ರಾಘವೇಂದ್ರ!?

Spread the love


✍🏼 ವರದಿ: ರಮೇಶ್ ಡಿ.ಜಿ, ಆನಂದಪುರ – ಶಿವಮೊಗ್ಗ

ಶಿವಮೊಗ್ಗ: ಮಲೆನಾಡಿನ ಹೃದಯಭಾಗವಾಗಿರುವ ಶಿವಮೊಗ್ಗಕ್ಕೆ ಮತ್ತೊಂದು ಪ್ರಮುಖ ರೈಲ್ವೆ ಸಂಚಾರದ ಗರಿ ಸೇರ್ಪಡೆ ಆಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರ ಮುಂದಾಳತ್ವದಲ್ಲಿ ಈಗಾಗಲೇ ಹಲವು ರೈಲು ಸಂಪರ್ಕಗಳ ಕ್ರಾಂತಿ ನಡೆದಿದ್ದು, ಇದೀಗ 2026ರ ಜನವರಿಯಿಂದ “ಒಂದೇ ಭಾರತ್ ರೈಲು” ಯೋಜನೆಯಡಿ ಶಿವಮೊಗ್ಗದಿಂದ ದೇಶದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಮಹತ್ವದ ಹೆಜ್ಜೆ ಇಡಲಾಗಿದೆ.

ಹೊಸ ರೈಲು ಸಂಪರ್ಕಗಳ ವಿವರ ಹೀಗಿದೆ:

ಶಿವಮೊಗ್ಗ ↔ ಬೆಂಗಳೂರು

ಶಿವಮೊಗ್ಗ ↔ ತಿರುಪತಿ

ಶಿವಮೊಗ್ಗ ↔ ಎರ್ನಾಕುಲಂ

ಶಿವಮೊಗ್ಗ ↔ ಬಗಲ್‍ಪುರ್ (ಬಿಹಾರ್)

ಶಿವಮೊಗ್ಗ ↔ ಛಂಡೀಗಡ‍


ವಿಶೇಷ: “ಒಂದೇ ಭಾರತ್ ರೈಲು” ಯೋಜನೆಯಡಿ ಈ ರೈಲುಗಳು ಸಂಚರಿಸಲಿದ್ದು, ಮಲೆನಾಡನ್ನು ನೇರವಾಗಿ ದಕ್ಷಿಣದಿಂದ ಉತ್ತರದವರೆಗೆ ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲಿದೆ. ಇದು ಪ್ರವಾಸ, ವ್ಯಾಪಾರ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಲಿದೆ.

ಶ್ರೀ ಬಿ ವೈ ರಾಘವೇಂದ್ರರ ಹೋರಾಟ ಹಾಗೂ ಹೃತ್ಪೂರ್ವಕ ಪ್ರಯತ್ನಗಳ ಫಲವಾಗಿ ಈ ಹೊಸ ರೈಲು ಯೋಜನೆಗಳು ಕಾರ್ಯರೂಪಕ್ಕೆ ಬರುವುದು ನಿಶ್ಚಿತವಾಗಿದೆ. ಅವರು ಸಂಸದರಾದ ಬಳಿಕ ಶಿವಮೊಗ್ಗ ರೈಲ್ವೆ ನಕ್ಷೆ ತೀರಾ ಬದಲಾಗಿದೆ ಎನ್ನುವುದು ಜನಮತ.

ಅಭಿವೃದ್ಧಿಯ ಪಥದಲ್ಲಿ ನಿಲ್ಲದ ಹೆಜ್ಜೆ –
ಇದು ಕೇವಲ ರೈಲು ಸಂಪರ್ಕವಲ್ಲ, ಇದು ಮಲೆನಾಡಿನ ದಿಕ್ಕು ಬದಲಾಯಿಸುವ ಆರ್ಥಿಕ ಬೆಳವಣಿಗೆಯ ಪಯಣವಾಗಿದೆ!

WhatsApp Image 2025-06-21 at 19.57.59
Trending Now