September 9, 2025
sathvikanudi - ch tech giant

ದುರಹಂಕಾರಿ ಪಿ.ಡಿ.ಒ. ರಾಘವೇಂದ್ರ ಅಮಾನತು ಮಾಡಬೇಕು – ಗುಜ್ಜನಡು ಗ್ರಾ.ಪಂ. ಸದಸ್ಯರ ಆಗ್ರಹ..!?

Spread the love

ತುಮಕೂರು :

ಪಾವಗಡ (ತಾಲೂಕು) ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಪ್ರಯತ್ನಿಸುತ್ತಿರುವಾಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ರಾಘವೇಂದ್ರ ಅವರ ಅಹಂಕಾರ ಮತ್ತು ನಿರ್ಲಕ್ಷ್ಯದಿಂದ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.



ಗ್ರಾಮದ ಪ್ರಮುಖ ತೊಂದರೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ನಿರಂತರ ವಿದ್ಯುತ್ ವ್ಯತ್ಯಯ, ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಾಗಿದ್ದು, ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಸದಸ್ಯರು ದೂರಿದ್ದಾರೆ. “ನಮ್ಮ ಹಳ್ಳಿಗೆ ನೀರಿಲ್ಲ, ಕರಂಟ್ ಇಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವವರೇ ಇಲ್ಲ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರ್ಥವೇನು?” ಎಂದು ಸದಸ್ಯರು ಕಿಡಿಕಾರಿದ್ದಾರೆ.



ಗ್ರಾಮದ ಜನಪ್ರತಿನಿಧಿಗಳು ಪಿಡಿಓ ರಾಘವೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವರ ಅಹಂಕಾರ ಹಾಗೂ ಕೋರಾವಾಸನಿಕ ನೀತಿಯ ಕಾರಣದಿಂದ ಗ್ರಾಮಸ್ಥರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ತಿಳಿಸಿದ್ದಾರೆ. “ನಾವು ಗ್ರಾಮಸ್ಥರ ಪರವಾಗಿ ಮಾತನಾಡಿದರೆ, ನಮ್ಮ ಮಾತನ್ನು ಕಡೆಗಣಿಸಲಾಗುತ್ತಿದೆ. ಜನಪ್ರತಿನಿಧಿಗಳ ಪ್ರಭಾವವನ್ನೇ ಕುಂದಿಸಲು ಪಿಡಿಓ ಇಂತಹ ವರ್ತನೆ ತೋರುತ್ತಿದ್ದಾರೆ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹತ್ತಿರದವರು ಹಲವು ಬಾರಿ ದೂರು ನೀಡಿದರೂ, ಇವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಗ್ರಾಮಸ್ಥರು ಹಾಗೂ ಸದಸ್ಯರು ಪಿಡಿಓ ರಾಘವೇಂದ್ರ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಮತ್ತು ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಸಹ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳು PDO ವಿರುದ್ಧ ಸೂಕ್ತ ಕ್ರಮ ಕೈಗೊಲ್ಲದೆ ಇರುವುದಕ್ಕೆ ಕಾರಣವೇನು…? ಅಧಿಕಾರಿಗಳ ನಿರ್ಲಕ್ಷತೆ ಸಾರ್ವಜನಿಕರಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿಮುಂದೆ  ಧರಣಿ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

WhatsApp Image 2025-06-21 at 19.57.59
Trending Now