September 9, 2025
sathvikanudi - ch tech giant

ಶಿವಮೊಗ್ಗದಲ್ಲಿ  ಡಬಲ್ ಮರ್ಡರ್….

Spread the love

ಹಳೆಯ ಶಿವಮೊಗ್ಗದಲ್ಲಿ ಮತ್ತೆ ರೌಡಿಶೀಟರ್ಸ್ ನಡುವೆ ವಾ‌ರ್ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಲಷ್ಕರ್ ಮೊಹಲ್ಲಾ ಸರ್ಕಲ್‌ನಲ್ಲಿಯೇ ಇಬ್ಬರನ್ನ ಅಟ್ಟಾಡಿಸಿ ಹತ್ಯೆ ಮಾಡಲಾಗಿದ್ದು, ಅವರ ಮೇಲೆ ಕಲ್ಲು ಎತ್ತಿಹಾಕಲಾಗಿದೆ. ಘಟನೆಯಲ್ಲಿ ಓರ್ವ ಗಂಭೀರವಾಗಿದ್ದು ಆತನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಸುಮಾರು 5.30 80 6.00 3 3 ಮೊಹಲ್ಲಾಕ್ಕೆ ಬಂದ ಗ್ಯಾಂಗ್‌ವೊಂದು ಸ್ಥಳೀಯ ರೌಡಿಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ಅಟ್ಯಾಕ್ ಮಾಡಿದೆ. ಈ ವೇಳೆ ಅಲ್ಲಿಯೇ ಇದ್ದ ಯಾಸಿನ್‌ ಕುರೇಶಿ ಗ್ಯಾಂಡ್ ಪ್ರತಿದಾಳಿ ನಡೆಸಿದೆ. ಈ ವೇಳೆ ಎದುರಾಳಿ ಗ್ಯಾಂಗ್‌ನ ಕೆಆರ್‌ಪುರಂ ನಿವಾಸಿ ಸೋಹಲ್, ಅಲಿಯಾಸ್ ಖಲಂದ‌ರ್ ಅಲಿಯಾಸ್ ಸೇಬು 32 ವರ್ಷ ಹಾಗೂ ಅಣ್ಣಾನಗರ ನಿವಾಸಿ ಗೌಸ್ 30 ವರ್ಷ ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಬಳಿಕ ಅಲ್ಲಿಯೇ ಇದ್ದ ಚಪ್ಪಡಿ ಕಲ್ಲುಗಳನ್ನ ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಇನ್ನೂ ಇದಕ್ಕೂ ಮೊದಲು ನಡೆದ ಗ್ಯಾಂಗ್ನ ಅಟ್ಯಾಕ್‌ನಲ್ಲಿ ಗಾಯಗೊಂಡಿರುವ ಯಾಸಿನ್ ಸ್ಥಿತಿ ಸಹ ಗಂಭೀರವಾಗಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಸ್‌ಪಿ ಹೇಳಿದ್ದೇನು?



ಸುಗಮವಾಗಿ ಚುನಾವಣೆ ನಡೆಸಿದ್ದ ಮೂಡ್‌ನಲ್ಲಿದ್ದ ಎಸ್‌ಪಿ ಮಿಥುನ್ ಕುಮಾ‌ರ್ ವಿಷಯ ತಿಳಿಯುತ್ತಲೆ ಸ್ಥಳಕ್ಕೆ ಬಂದಿದ್ದಾರೆ. ನಡೆದ
ಘಟನೆ ವಿವರ ನೀಡಿದ ಅವರು ಮೃತರ ಗುರುತು ವಿವರ ನೀಡಿ ಉಳಿದ ಮಾಹಿತಿ ತದನಂತರ ನೀಡುವುದಾಗಿ ತಿಳಿಸಿದ್ದಾರೆ.

ನಡೆದಿದ್ದೇನು?



ಕೆಆರ್ ಪುರಂ, ಎಂಕೆಕೆ ರೋಡ್ ಹಾಗೂ ಟಿಪ್ಪು ನಗರದ ಬೇರೆ ಬೇರೆ ಗ್ಯಾಂಗ್ ಗಳು ಹಳೆಯ ಶಿವಮೊಗ್ಗದಲ್ಲಿ ಹುಟ್ಟಿಕೊಂಡಿದೆ. ಇದು ಗೊತ್ತಾಗಿದ್ದು ಇವತ್ತಿನ ಗಲಾಟೆಯಲ್ಲಿಯೇ ಕೆಆರ್ ಪುರಂ ನಿವಾಸಿ ಸೇಬು, ಯಾಸಿನ್ ಕುರೇಶಿ ಮೇಲೆ ಅಟ್ಯಾಕ್ ಮಾಡಲು ಹೋಗಿ ಇವತ್ತು ಹತನಾಗಿದ್ದಾನೆ. ಇವತ್ತು ಮೇಲ್ಕಂಡ ಮೂರು ಏರಿಯಾಗಳ ಹುಡುಗರ ನಡುವೆ ಗಲಾಟೆ ಯಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ಮೂರು ದಿನಗಳಿಂದ ಈ ಗ್ಯಾಂಗ್‌ ನಡುವೆ ಕಿರಿಕ್ ಜೋರಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇವೆಲ್ಲದರ ನಡುವೆ ಸಂಜೆ ಕೆಆರ್ ಪುರಂ ನಿವಾಸಿ ಖಲಂದರ್ ಅಲಿಯಾಸ್ ಸೇಬು

ಸೇಬು ಹಾಗೂ ಗೌಸ್‌ನ್ನ ಹತ್ಯೆ ಮಾಡಿದ್ದಾರೆ. ಈ ಬಳಿಕ ಬೈಕ್‌ನಲ್ಲಿ ಆರೋಪಿಗಳು ಎಂಕೆಕೆ ರೋಡ್‌ ಸುತ್ತಮುತ್ತ ಓಡಾಡಿ ಮಚ್ಚು ತೋರಿಸಿದ್ದಾರೆ ಎಂಬ ಮಾಹಿತಿಯಿದ್ದು, ಈ ಸಂಬಂಧ ಪೊಲೀಸರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ.

WhatsApp Image 2025-06-21 at 19.57.59
Trending Now