September 9, 2025
sathvikanudi - ch tech giant

ಭೀಮವಾದ ದಲಿತ ಸಂಘರ್ಷ ಸಮಿತಿ ಸಭೆ: ಹೊಸಕೋಟೆಯಲ್ಲಿ ಮಹತ್ವದ ಚರ್ಚೆಗಳು..!?

Spread the love

ಹೊಸಕೋಟೆ : ಭೀಮವಾದ ದಲಿತ ಸಂಘರ್ಷ ಸಮಿತಿಯ ಸಭೆ ರಾಜ್ಯ ಸಂಚಾಲಕ ಬಿ ಎನ್ ವೆಂಕಟೇಶಣ್ಣನವರ ಆದೇಶದಂತೆ ದಿನಾಂಕ 22 ಫೆಬ್ರವರಿ 2025 ರಂದು ಯಶಸ್ವಿಯಾಗಿ ನಡೆಯಿತು. ಈ ಮಹತ್ವದ ಸಭೆಗೆ ಬಿ ಎನ್ ವೆಂಕಟೇಶ್ ಅಣ್ಣನವರು (ರಾಜ್ಯ ಸಂಚಾಲಕರು), ನಾಗವೇಣಿ ಮೇಡಮ್, ಮಹದೇವಪ್ಪ ಸಣ್ಣೇಗೌಡರು, ಎಂ. ಮಂಜುನಾಥ್, ದಿವ್ಯ ಕೆ. ವೈ., ಮುನಿರಾಜ್, ಅರುಣ್, ಮಂಜುಳಾ, ಸರಸ್ವತಿ, ಪಾರ್ವತಿ ಹಾಗೂ ವಿವಿಧ ಹೋಬಳಿ ಪದಾಧಿಕಾರಿಗಳು ಭಾಗವಹಿಸಿದ್ದರು.



ಸಭೆಯಲ್ಲಿ 09 ಫೆಬ್ರವರಿ 2025 ರಂದು ನಡೆದಿದ್ದ ಹೊಸಪೇಟೆ ರಾಜ್ಯ ಸಮಿತಿ ಸಭೆಯ ಅಜೆಂಡಗಳ ಕುರಿತು ಚರ್ಚೆ ನಡೆಯಿತು. ವಿಶೇಷವಾಗಿ ಪಿಟಿಸಿಎಲ್ ಕಾಯ್ದೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಿತು. ದಲಿತರಿಗೆ ಸೇರಿದ ಭೂಮಿ ಪರಭಾರೆ ಆಗದಂತೆ ಮತ್ತು ದಲಿತರ ಉನ್ನತಿಕರಣಕ್ಕಾಗಿ ಅಂಬೇಡ್ಕರ್ ಹಣಕಾಸು ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅಗತ್ಯತೆ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯ ಪ್ರಮುಖ ನಿರ್ಧಾರಗಳಂತೆ, ದಿನಾಂಕ 24 ಫೆಬ್ರವರಿ 2025 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವ ಕಾರ್ಯವನ್ನು ನಡೆಸಲು ತೀರ್ಮಾನಿಸಲಾಯಿತು.

ಅಲ್ಲದೆ, ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆಗಳು ಮತ್ತು ಏಪ್ರಿಲ್ 14 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಚರ್ಚಿಸಲಾಯಿತು.

ಸಭೆಯನ್ನು ಮುಚ್ಚುವ ಸಂದರ್ಭದಲ್ಲಿ ಬಿ ಎನ್ ವೆಂಕಟೇಶ್ ಅಣ್ಣನವರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಸಲಹೆಗಳನ್ನು ನೀಡಿದರು.

ವರದಿ: ಆರತಿ ಗಿಳಿಯಾರು

WhatsApp Image 2025-06-21 at 19.57.59
Trending Now